ಸ್ಟೇಜ್-4 ಮಾಪನದ ವಾಹನಗಳನ್ನು ನೋಂದಾಯಿಸಲು ಅವಕಾಶ

07/01/2021

ಮಡಿಕೇರಿ ಜ.7 : ಇ-ವಾಹನ ಪೋರ್ಟಲ್‍ನಲ್ಲಿ ನಮೂದಾಗಿ, ನೋಂದಾಣಿಯಾಗದೇ ಉಳಿದಿರುವ ಭಾರತ್ ಸ್ಟೇಜ್-4 ಮಾಪನದ ಎಲ್ಲಾ ವಾಹನಗಳನ್ನು 2021 ರ ಜನವರಿ, 16 ರೊಳಗೆ ನೋಂದಾಯಿಸಿಕೊಳ್ಳಲು ಕೊನೆಯ ಅವಕಾಶವಿದ್ದು, 2020ರ ಮಾರ್ಚ್, 31 ರವರೆಗೆ ಮಾರಾಟವಾಗಿ ಇ-ವಾಹನ ಪೋರ್ಟಲ್‍ನಲ್ಲಿ ನಮೂದಾಗಿ ನೋಂದಣಿಯಾಗದೇ ಬಾಕಿ ಉಳಿದಿರುವ ಮಾಲೀಕರು ಮಾತ್ರ ಈ ಅವಧಿಯಲ್ಲಿ ತಮ್ಮ ವಾಹನಗಳನ್ನು ನೋಂದಾಯಿಸಿಕೊಳ್ಳಬಹುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಮಂಜುನಾಥ್ ಶಿರಾಲಿ ಅವರು ತಿಳಿಸಿದ್ದಾರೆ.