ಕುಶಾಲನಗರ SPORTS ಕ್ಲಬ್ ತಂಡ ಚಾಂಪಿಯನ್

January 7, 2021

ಕುಶಾಲನಗರ: ಮೂರ್ನಾಡಿನ ಫೀಲ್ಡ್ ಮಾರ್ಷಲ್ ಹಾಕಿ ಕ್ಲಬ್ ಆಶ್ರಯದಲ್ಲಿ ನಡೆದ ರಾಜ್ಯ ಮಟ್ಟದ ಮಾರ್ಷಲ್ ಕಪ್ ಹಾಕಿ ಪಂದ್ಯಾವಳಿಯಲ್ಲಿ ಕುಶಾಲನಗರದ SPORTS ಕ್ಲಬ್ ತಂಡ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ.
ಮೂರ್ನಾಡಿನ ಬಾಚೆಟ್ಟಿರ ಲಾಲು ಮುದ್ದಯ್ಯ ಮೈದಾನದಲ್ಲಿ ನಡೆದ ಫೈನಲ್ ಪಂದ್ಯಾಟದಲ್ಲಿ 2-1 ಗೋಲುಗಳಿಂದ ಮೂರ್ನಾಡಿನ ಬ್ಲೇಜರ್ಸ್ ತಂಡದ ವಿರುದ್ದ ಜಯಗಳಿಸಿದ್ದಾರೆ. ಪಂದ್ಯಾಟದಲ್ಲಿ ತಂಡದ ನಾಯಕ ಕಿಶನ್ ನೇತೃತ್ವದ ತಂಡದಲ್ಲಿ ದೀಕ್ಷಿತ್, ಪುನೀತ್, ಮನೋಜ್, ಪೃಥ್ವಿ, ದಿನೇಶ್, ಚಂದ್ರಶೇಖರ್, ರೋಷನ್, ಚೇತನ್ ಪಾಲ್ಗೊಂಡಿದ್ದರು. ಕುಶಾಲನಗರ ತಂಡದ ಮನೋಜ್ ಸರಣಿ ಪುರುಷೋತ್ತಮ, ದೀಕ್ಷಿತ್ ಉತ್ತಮ ಫಾರ್ವಡ್ ಆಟಗಾರ ಪ್ರಶಸ್ತಿ ಪಡೆದುಕೊಂಡರು. ಪಂದ್ಯಾವಳಿಯಲ್ಲಿ ಒಟ್ಟು 35 ತಂಡಗಳು ಪಾಲ್ಗೊಂಡಿದ್ದವು.
ಹಾಕಿ ಪಂದ್ಯಾವಳಿಯಲ್ಲಿ ಜಯಗಳಿಸಿದ ತಂಡವನ್ನು ಕುಶಾಲನಗರದ ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಕುಶಾಲನಗರದ ಉದ್ಯಮಿ ಹಾಗೂ ರೆಡ್‍ಕ್ರಾಸ್ ಸಮಿತಿ ಅಧ್ಯಕ್ಷರಾದ ಎಸ್.ಕೆ.ಸತೀಶ್ ಮತ್ತಿತರರು ವಿಜೇತ ತಂಡದ ಸದಸ್ಯರಿಗೆ ಶುಭ ಹಾರೈಸಿದರು.

error: Content is protected !!