ಜ. 10 ರಂದು ನೆಲ್ಯಾಹುದಿಕೇರಿಯಲ್ಲಿ ಎಸ್ ಕೆ ಎಸ್ ಎಸ್ ಎಫ್ ಮುನ್ನಡೆ ಯಾತ್ರೆಯ ಸ್ವೀಕಾರ ಸಮಾರಂಭ

January 8, 2021

ಮಡಿಕೇರಿ ಜ.8 : ಎಸ್ ಕೆ ಎಸ್ ಎಸ್ ಎಫ್ ಕೇಂದ್ರ ಸಮಿತಿ ಅಧ್ಯಕ್ಷ ಪಾಣಕ್ಕಾಡ್ ಸಯ್ಯಿದ್ ಹಮೀದಲಿ ಶಿಹಾಬ್ ತಂಙಳ್ ರವರ ನೇತೃತ್ವದಲ್ಲಿ ನಡೆಯುತ್ತಿರುವ ಮುನ್ನಡೆ ಯಾತ್ರೆಯ ಸ್ವೀಕಾರ ಕಾರ್ಯಕ್ರಮ ಜ. 10 ರಂದು ನೆಲ್ಯಾಹುದಿಕೇರಿಯ ಶಾದಿ ಮಹಲ್ ಸಭಾಂಗಣದಲ್ಲಿ ನಡೆಯಲಿದೆ.

ಅಂದು ಬೆಳಿಗ್ಗೆ 9 ಗಂಟೆಗೆ ಸರಿಯಾಗಿ ನೆಲ್ಯಾಹುದಿಕೇರಿಯ ಶಾದಿ ಮಹಲ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಎಸ್.ಕೆ.ಎಸ್.ಎಸ್.ಎಫ್ ಕೊಡಗು ಜಿಲ್ಲಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ಅಸ್ತಿತ್ವ, ಹಕ್ಕು ಯುವಜನಾಂಗ ಮರಳಿ ಪಡೆಯುತ್ತಿದೆ ಎಂಬ ಧ್ಯೇಯ ವಾಕ್ಯದೊಂದಿಗೆ ಎಸ್.ಕೆ.ಎಸ್.ಎಸ್.ಎಫ್ ಆರಂಭಿಸಿದ ಅಭಿಯಾನದ ಅಂಗವಾಗಿ , ಡಿ. 30 ರಂದು ತಿರುವನಂತಪುರಂ ನಿಂದ ಪ್ರಾರಂಭಗೊಂಡ ಮುನ್ನಡೆ ಯಾತ್ರೆಯು ಜನವರಿ 11ನೇ ತಾರೀಖು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಸಮಾಪ್ತಿಗೊಳ್ಳಲಿದೆ. ಇದರ ಭಾಗವಾಗಿ ಮುನ್ನಡೆ ಯಾತ್ರೆಯು ಜಿಲ್ಲೆಯ ಮೂಲಕ ಹಾದು ಹೋಗಲಿದ್ದು, ಅಭೂತಪೂರ್ವ ಸ್ವಾಗತ ಕೋರಲು ಎಸ್.ಕೆ.ಎಸ್.ಎಸ್.ಎಫ್ ಜಿಲ್ಲಾ ಸಮಿತಿ ನಿರ್ಧರಿಸಿದೆ.

ಮುನ್ನಡೆ ಯಾತ್ರೆಯ ಸ್ವೀಕಾರ ಕಾರ್ಯಕ್ರಮದ ಉದ್ಘಾಟನೆಯನ್ನು ಕೊಡಗಿನ ಉಪ ಖಾಝಿ ಸಮಸ್ತ ಕೇಂದ್ರ ಸಮಿತಿ ಸದಸ್ಯರಾದ ಶೈಖುನಾ ಎಂ ಅಬ್ದುಲ್ಲ ಫೈಝಿ ಉಸ್ತಾದ್ ನಡೆಸಲಿದ್ದಾರೆ. ಧ್ಯೇಯ ವಾಕ್ಯದಂತೆ ಕಾರ್ಯಕ್ರಮದ ಬಗ್ಗೆ ವಿಷಯವನ್ನು ಕೇಂದ್ರ ನಾಯಕರು ಮಂಡಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮುನ್ನಡೆ ಯಾತ್ರೆಯ ಸಾರಥಿ, ಎಸ್.ಕೆ.ಎಸ್.ಎಸ್ಎಫ್ ಕೇಂದ್ರ ಸಮಿತಿ ಅಧ್ಯಕ್ಷರಾದ ಪಾಣಕ್ಕಾಡ್ ಸಯ್ಯಿದ್ ಹಮೀದಲಿ ಶಿಹಾಬ್ ತಂಙಳ್, ಪ್ರಧಾನ ಕಾರ್ಯದರ್ಶಿ ಸತ್ತಾರ್ ಪಂದಲ್ಲೂರ್, ಕೋಶಾಧಿಕಾರಿ ರಶೀದ್ ಫೈಝಿ ವೆಳ್ಳಾಯಿಕ್ಕೊಡ್, ಅಯ್ಯೂಬ್ ಮಾಸ್ಟರ್ ಹೀಗೆ ಎಸ್.ಕೆ.ಎಸ್.ಎಸ್.ಎಫ್ ಕೇಂದ್ರ ಸಮಿತಿಯ ಹಲವು ನಾಯಕರುಗಳು ಆಗಮಿಸಲಿದ್ದಾರೆ.

ಅಬ್ದುರಹ್ಮಾನ್ ಉಸ್ತಾದ್ ಗೋಣಿಕೊಪ್ಪ, ಇಸ್ಮಾಯಿಲ್ ಉಸ್ತಾದ್, ಉಮರ್ ಫೈಝಿ ಎಡಪಾಲ, ಇಕ್ಬಾಲ್ ಉಸ್ತಾದ್ ನೆಲ್ಲಿಹುದಿಕೇರಿ, ಆರಿಫ್ ಫೈಝಿ, ಅಬೂಬಕರ್ ಮುಸ್ಲಿಯಾರ್, ಕೊಡಗು ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷರಾದ ಯಾಕೂಬ್ ಕೆ ಎ,ಮಾಜಿ ಶಾಸಕರಾದ ಕೆ ಎಂ ಇಬ್ರಾಹಿಂ ಮಾಸ್ಟರ್, ಬಶೀರ್ ಹಾಜಿ ಪೆರಂಬಾಡಿ ಹೀಗೆ ಹಲವು ಧಾರ್ಮಿಕ, ಸಾಮಾಜಿಕ ನೇತಾರರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಎಸ್ ಕೆ ಎಸ್ ಎಸ್ ಎಫ್ ಕೊಡಗು ಜಿಲ್ಲಾಧ್ಯಕ್ಷರಾದ ತಮ್ಲೀಕ್ ದಾರಿಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


error: Content is protected !!