ವಿರಾಜಪೇಟೆಯಲ್ಲಿ “ಟೈಗರ್ ಫೈ” ಮುಕ್ತ ಕಾಲ್ಚೆಂಡು ಪಂದ್ಯಾವಳಿಗೆ ಚಾಲನೆ

08/01/2021

ವಿರಾಜಪೇಟ,ಜ.08: ಸುಂಕದಕಟ್ಟೆ ಅಯೋಧ್ಯ ಫ್ರೆಂಡ್ಸ್ ಕ್ಲಬ್ ವತಿಯಿಂದ ಆಯೋಜಿಸಲಾದ ಕೊಡಗು ಜಿಲ್ಲಾ ಪುರುಷರ ಟೈಗರ್ ಫೈ ಮುಕ್ತ ಕಾಲ್ಚೆಂಡು ಪಂದ್ಯಾವಳಿಗೆ ಬ್ಲೂ ಸ್ಟಾರ್ ಪುಟ್ಬಾಲ್ ಕ್ಲಬ್‍ನ ಮಾಜಿ ಆಟಗಾರ ಅಣ್ಣಯ್ಯ ಚೆಂಡು ಒದೆಯುವ ಮೂಲಕ ಚಾಲನೆ ನೀಡಿದರು.

ವಿರಾಜಪೇಟೆಯ ಪಂಪ್ ಕೆರೆಯ ಸಮೀಪದ ಮೈದಾನದಲ್ಲಿ ವಕೀಲ ಹಾಗೂ ನಗರ ಭಾ.ಜ.ಪ ಅಧ್ಯಕ್ಷ ಟಿ.ಪಿ.ಕೃಷ್ಣ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಪಂದ್ಯಾಟದಲ್ಲಿ ಭಾಗವಹಿಸುವುದು ಮುಖ್ಯ. ಸೂಲು ಗೆಲುವು ಒಂದು ನಾಣ್ಯದ ಎರಡು ಮುಖಗಳಂತ್ತಿದ್ದು, ಪಂದ್ಯವನ್ನು ಸಾವಲಾಗಿ ಸ್ವೀಕರಿಸಿ ಭಾತೃತ್ವಕ್ಕೆ ಪ್ರಮುಖ್ಯತೆಯನ್ನು ನೀಡಿದಲ್ಲಿ ಸ್ನೇಹಚಾರವು ವೃದ್ಧಿಗೊಳ್ಳುತ್ತದೆ ಎಂದರು.
ದೇಶ ವ್ಯಾಪ್ತಿ ಅಯೋಧ್ಯದಲ್ಲಿ ಪ್ರಭು ಶ್ರೀ ರಾಮಚಂದ್ರರ ಭೌವ್ಯ ದೇಗುಲಕ್ಕೆ ಚಂದಾ ಹಣವು ಸ್ವೀಕರಿಸಲಾಗುತ್ತಿದು,್ದ ಮಂದಿರ ನಿರ್ಮಾಣಕ್ಕೆ ಸಹಕಾರ ನೀಡುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ವಿರಾಜಪೇಟೆ ತಾ.ಪಂ ಸದಸ್ಯ ಬಿ.ಎಂ. ಗಣೇಶ್, ಅರ್ಜಿ ಪಂ. ಸದಸ್ಯ ಕೆ.ಎನ್. ಉಪೇಂದ್ರ ಎಂ.ಎ. ಆನಂದ್, ಕಾಫಿ ಬೆಳೆಗಾರ ಮಂಡೇಡ ಜೀವನ್ ಮತ್ತು ಪ್ರಮುಖರಾದ ಮರ್ವಿನ್ ಲೊಬೋ, ಅಯೋಧ್ಯ ಫ್ರೆಂಡ್ಸ್ ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಸರ್ವ ಸದಸ್ಯರು ಹಾಜರಿದ್ದರು.

ಮೊದಲಿಗೆ ಅಯೋದ್ಯ ಫ್ರೆಂಡ್ಸ್ ಮತ್ತು ವಿರಾಜಪೇಟೆ ಫ್ರೆಂಡ್ ತಂಡಗಳ ನಡುವೆ ನಡೆದ ಪಂದ್ಯಾವಳಿಯಲ್ಲಿ 3-1 ಗೊಲುಗಳಿಂದ ಅಯೋಧ್ಯ ಫ್ರೆಂಡ್ಸ್ ತಂಡವು ವಿಜಯವಾಯಿತು. ಒಟ್ಟು 35 ತಂಡಗಳು ಭಾಗವಹಿಸುತ್ತಿದ್ದು, ಜ. 10 ರಂದು ಅಂತಿಮ ಪಂದ್ಯ ಹಾಗೂ ಸಮರೋಪ ಸಮಾರಂಭ ನಡೆಯಲಿದೆ.