ಬಿಳಿಗೇರಿಯಲ್ಲಿ ಸಂಪನ್ನಗೊಂಡ ಶ್ರೀಅರ್ಧನಾರೀಶ್ವರ ದೇವಾಲಯದ ಅಷ್ಟಬಂಧ ದ್ರವ್ಯಕಲಶೋತ್ಸವ

January 8, 2021

ಮಡಿಕೇರಿ ಜ. 8 : ಬಿಳಿಗೇರಿಯ ಶ್ರೀಅರ್ಧನಾರೀಶ್ವರ ದೇವಾಲಯದಲ್ಲಿ ಅಷ್ಟಬಂಧ ದ್ರವ್ಯಕಲಶೋತ್ಸವ ವಿವಿಧ ಧಾರ್ಮಿಕ ಕೈಂಕರ್ಯಗಳೊಂದಿಗೆ ಸಂಪನ್ನಗೊಂಡಿದೆ.
ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಗಣಪತಿ ಹೋಮ, ತತ್ವ ಹೋಮ, ತತ್ವ ಕಲಶ ಪೂಜೆ, ತತ್ವಕಲಶಾಭಿಷೇಕ ಹಾಗೂ ಶ್ರೀದೇವರಿಗೆ ಅಷ್ಟಬಂಧ ಲೇಪನ, ಪರಿಕಲಶಾಭಿಷೇಕ ಧ್ರವ್ಯ ಕಲಶಾಭಿಷೇಕ ನಡೆಯಿತು.
ಮಧ್ಯಾಹ್ನ ಮಹಾಪೂಜೆ ನಂತರ ಶ್ರೀಭೂತ ಬಲಿ, ಬಲಿ ಉತ್ಸವ, ರಾಜಾಂಗಣ ಪ್ರಾಸಾದ ಮಂತ್ರಾಕ್ಷತೆ ಹಾಗೂ ಚಂಡೆವಾದ್ಯಗಳೊಂದಗೆ ಪೂಜಾವಿಧಿ ವಿಧಾನಗಳು ಸಂಪನ್ನಗೊಂಡವು.
ಅಷ್ಟಬಂಧ ದ್ರವ್ಯಕಲಶೋತ್ಸವದ ಪ್ರಯುಕ್ತ ಭಕ್ತಾಧಿಗಳಿಗೆ ಮೂರು ದಿನಗಳ ಕಾಲ ಬೆಳಗ್ಗಿನ ಉಪಹಾರ, ಮಧ್ಯಾಹ್ನ ಹಾಗೂ ರಾತ್ರಿ ಅನ್ನದಾನ ನಡೆಯಿತು.
ಸಾರ್ವಜನರಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದೇವಾರ ಕೃಪೆಗೆ ಪಾತ್ರರಾದರು.

error: Content is protected !!