ಮುನ್ನಡೆ ಯಾತ್ರೆಯ ಸ್ವೀಕಾರ ಸಮಾರಂಭ ಯಶಸ್ವಿಗೊಳಿಸಲು ಎಸ್ ಕೆ ಎಸ್ ಎಸ್ ಎಫ್ ಜಿಸಿಸಿ ಕೊಡಗು ಕರೆ

January 9, 2021

ಮಡಿಕೇರಿ ಜ. 9 : ಎಸ್ ಕೆ ಎಸ್ ಎಸ್ ಎಫ್ ಕೇಂದ್ರ ಸಮಿತಿ ಅಧ್ಯಕ್ಷರಾದ ಪಾಣಕ್ಕಾಡ್ ಸಯ್ಯಿದ್ ಹಮೀದಲಿ ಶಿಹಾಬ್ ತಂಙಳ್ ಅವರ ನೇತೃತ್ವದಲ್ಲಿ ಜ. 10 ರಂದು ಮುನ್ನಡೆ ಯಾತ್ರೆ ನಡೆಯಲಿದೆ.

ಅಂದು ಬೆಳಿಗ್ಗೆ 9 ಘಂಟೆಗೆ ನೆಲ್ಯಾಹುದಿಕೇರಿಯ ಶಾದಿ ಮಹಲ್ ಸಭಾಂಗಣದಲ್ಲಿ ನಡೆಯಲಿರುವ ಮುನ್ನಡೆ ಯಾತ್ರೆಯ ಸ್ವೀಕಾರ ಸಮಾರಂಭವನ್ನು ಯಶಸ್ವಿಗೊಳಿಸಬೇಕಾಗಿ ಎಸ್ ಕೆ ಎಸ್ ಎಸ್ ಎಫ್ ಜಿಸಿಸಿ ಕೊಡಗು ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಅಸ್ತಿತ್ವ, ಹಕ್ಕು ಯುವಜನಾಂಗ ಮರಳಿ ಪಡೆಯುತ್ತಿದೆ ಎಂಬ ಧ್ಯೇಯ ವಾಕ್ಯದೊಂದಿಗೆ SಏSSಈ ಆರಂಭಿಸಿದ ಅಭಿಯಾನದ ಅಂಗವಾಗಿ ನಡೆಯುತ್ತಿರುವ ಮುನ್ನಡೆ ಯಾತ್ರೆಯು, ಸ್ವತಂತ್ರ ಪೂರ್ವ ಭಾರತದಲ್ಲಿ ಮುಸ್ಲಿಂ ಸಮುದಾಯ ರಾಜಕೀಯವಾಗಿ, ಶೈಕ್ಷಣಿಕವಾಗಿ,ಆರ್ಥಿಕವಾಗಿ ಸಾಮಾಜಿಕವಾಗಿಯೂ ಉನ್ನತ್ತಿಯಲ್ಲಿತ್ತು. ಆದರೆ ಕೆಲ ಪೂರ್ವಗ್ರಹ ಪೀಡಿತ ಶಕ್ತಿಗಳ ಕುತಂತ್ರಕ್ಕೆ ಬಲಿಯಾಗಿ ಐಕ್ಯತೆ ಚಿದ್ರಗೊಂಡು, ತತ್ವಾದರ್ಶಗಳು ಮಲಿನಗೊಂಡವು. ಅಲ್ಪಸಂಖ್ಯಾತ ಸಮುದಾಯಗಳ ಹಕ್ಕುಗಳನ್ನು ದಮನಿಸುತ್ತಿರುವ ಸಂದರ್ಭದಲ್ಲಿ, ಸಂವಿಧಾನ ಬದ್ಧವಾಗಿ ನೀಡಿರುವ ಧಾರ್ಮಿಕ ಹಕ್ಕನ್ನು ಪಡೆಯಲು, ಯುವಪೀಳಿಗೆಯನ್ನು ಕೌಶಲ್ಯಯುತ ಮಾನವ ಸಂಪನ್ಮೂಲವನ್ನಾಗಿ ಮಾರ್ಪಡಿಸಲು, ದೇಶದ ಬೆಳವಣಿಗೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಪಾತ್ರವನ್ನು ಎತ್ತಿ ಹಿಡಿಯಲು ಈ ಒಂದು ಯಾತ್ರೆ ಅತ್ಯಗತ್ಯವಾಗಿದೆ. ಶೈಕ್ಷಣಿಕವಾಗಿ ಮುಸ್ಲಿಂ ಸಮುದಾಯವನ್ನು ಮುಂದೆ ಬರಲು ಪ್ರೇರೇಪಿಸಿ, ಕಾನೂನಾತ್ಮಕ, ಆಡಳಿತಾತ್ಮಕ ಹುದ್ದೆಗಳಲ್ಲಿ ಮುಸ್ಲಿಂ ಸಮುದಾಯದ ಪ್ರಾತಿನಿಧ್ಯವನ್ನು ಎತ್ತಿ ತೋರಿಸಬೇಕಾಗಿದೆ. ನಮ್ಮ ಪೂರ್ವಜರು ರಕ್ತವನ್ನು ನೀಡಿ ನಮಗೆ ಸ್ವಾತಂತ್ರ್ಯವನ್ನು ತಂದು ಕೊಟ್ಟರು. ಈ ಸ್ವಾತಂತ್ರ್ಯವನ್ನು ರಕ್ಷಿಸಿ, ಅಸ್ತಿತ್ವವನ್ನು ಉಳಿಸಿ,ಶಾಂತಿಯ ಸಂದೇಶವನ್ನು ಎಲ್ಲೆಡೆ ಹರಡಿ, ಪ್ರಜಾಪ್ರಭುತ್ವ, ಸಂವಿಧಾನ ಬದ್ಧವಾಗಿ ಹಕ್ಕುಗಳನ್ನು ಪಡೆಯಲು ಆರಂಭಿಸಿದ ಮುನ್ನಡೆ ಯಾತ್ರೆಯ ಸ್ವೀಕಾರ ಸಮಾರಂಭ ಎಲ್ಲರೂ ಯಶಸ್ವಿಗೊಳಿಸಬೇಕಾಗಿ ಎಸ್ ಕೆ ಎಸ್ ಎಸ್ ಎಫ್ ಜಿಸಿಸಿ ಕೊಡಗು ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.

error: Content is protected !!