ಸಿದ್ದಾಪುರದಲ್ಲಿ ಎಸ್‍ಎಂಒ ಹಳೆ ವಿದ್ಯಾರ್ಥಿಗಳ ಸಂಗಮ

January 9, 2021

ಮಡಿಕೇರಿ ಜ. 9 : 1975ರಲ್ಲಿ ಪ್ರಾರಂಭವಾದ ಸಿದ್ದಾಪುರ ಮುಸ್ಲಿಂ ಜಮಾಯತ್ ಅಧೀನದಲ್ಲಿರುವ ಎಸ್ ಎಂ ಓ ಅನಾಥಾಶ್ರಮ ಜಿಲ್ಲೆಯ ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಆಶಾಕಿರಣವಾಗಿದ್ದು ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣ ನೀಡಿ ಸಮಾಜದಲ್ಲಿ ಪ್ರತಿಭಾನ್ವಿತರಾಗಿ ಗುರುತಿಸಿಕೊಳ್ಳಲು ಅವಕಾಶ ನೀಡಿ ಹಲವು ವಿದ್ಯಾರ್ಥಿಗಳಿಗೆ ದಾರಿದೀಪವಾಗಿದೆ ಎಂದು
ಸಿದ್ದಾಪುರ ಜುಮಾ ಮಸೀದಿಯ ಖತೀಬ್ ನೌಫಲ್ ಹುದವಿ ಹೇಳಿದ್ದಾರೆ.
ಮುನವ್ವಿರುಲ್ ಇಸ್ಲಾಂ ಮದರಸ ಸಭಾಂಗಣದಲ್ಲಿ ನಡೆದ 44ನೇ ವಾರ್ಷಿಕ ಸಮ್ಮೇಳನ ಹಾಗೂ ಹಳೆ ವಿದ್ಯಾರ್ಥಿಗಳ ಸಂಗಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ನಾವು ಕಲಿತ ವಿದ್ಯೆಯನ್ನು ಮಕ್ಕಳಿಗೆ ಕಲಿಸುವ ನಿಟ್ಟಿನಲ್ಲಿ ಪ್ರತಿಭಾನ್ವಿತರಾಗಿ ಮಾಡಬೇಕಾದ ಕರ್ತವ್ಯ ಪೆÇೀಷಕರಲ್ಲಿದೆ. ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ಪ್ರತಿಯೊಬ್ಬರು ಉನ್ನತ ಶಿಕ್ಷಣ ಪಡೆದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗಲಿದೆ.
ಎಸ್‍ಎಂಓ ಅನಾಥಾಲಯಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದ್ದು, ಕಲಿಯುವ ವಿದ್ಯಾರ್ಥಿಗಳಿಗೆ ಪೆÇ್ರೀತ್ಸಾಹಿಸಬೇಕಾಗಿದೆ ಎಂದರು.
ಹಳೆ ವಿದ್ಯಾರ್ಥಿ ಸಂಘದ ಸದಸ್ಯ ಇಬ್ರಾಹಿಂ ಗೋಣಿಕೊಪ್ಪ ಮಾತನಾಡಿ
ಸಿದ್ದಾಪುರ ಎಸ್‍ಎಂಒ ಅನಾಥಾಶ್ರಮದಲ್ಲಿ ಕಲಿತ ಅದೆಷ್ಟೋ ಮಂದಿ ಉನ್ನತ ಸ್ಥಾನದೊಂದಿಗೆ ಹಲವರು ಉದ್ಯೋಗದಲ್ಲಿದ್ದಾರೆ.
ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣ ನೀಡಿ ಸಮಾಜದ ಮುಖ್ಯವಾಹಿನಿಗೆ ತಂದಿರುವ ಶಿಕ್ಷಕರ ಶ್ರಮ ಅಪಾರವಾದದ್ದು. ಹಳೆ ವಿದ್ಯಾರ್ಥಿಗಳ ಸಂಘದ ವಾಟ್ಸಪ್ ಗ್ರೂಪ್ ರಚಿಸಲಾಗಿದ್ದು, ಜಿಲ್ಲೆ ಹಾಗೂ ರಾಜ್ಯದ ವಿವಿಧ ಭಾಗಗಳಲ್ಲಿ ನೆಲೆಸಿರುವ ನೂರಾರು ಮಂದಿ ಎಸ್‍ಎಂಒ ಅನಾಥಾಲಯಕ್ಕೆ ಕೈಲಾದ ಕೊಡುಗೆ ನೀಡುವುದಾಗಿ ಹೇಳಿದ ಅವರು ಹಲವು ವರ್ಷಗಳಿಂದ ದಾನಿಗಳ ಸಹಕಾರದಿಂದ ನಡೆಯುತ್ತಿದ್ದು, ಈಗ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ ಎಲ್ಲಾ ರೀತಿಯ ಪೆÇ್ರೀತ್ಸಾಹ ನೀಡಲಾಗುವುದು ಎಂದರು.
ಸಿದ್ದಾಪುರ ಮುಸ್ಲಿಂ ಜಮಾಅತ್ ಅಧ್ಯಕ್ಷ ಯು. ಎಂ ಮುಸ್ತಫಾ ಹಾಜಿ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಉಮ್ಮರ್, ಸಿದ್ದಾಪುರ ಮುಸ್ಲಿಂ ಜಮಾಆತ್ ಕಮಿಟಿಯ ಪ್ರಮುಖರಾದ ರವೂಫ್ ಹಾಜಿ, ಕರೀಮ್, ಮೊಹಮ್ಮದ್ ಅಲಿ, ಸಮೀರ್, ಮುನವ್ವಿರುಲ್ ಇಸ್ಲಾಂ ಮದ್ರಸ ಮುಖ್ಯ ಅಧ್ಯಾಪಕ ಆರಿಫ್ ಪೈಝಿ, ಸಂಘದ ಪ್ರಮುಖರಾದ ಹಸೈನಾರ್ ಉಸ್ತಾದ್, ಬಶೀರ್ ಮದನಿ ಉಸ್ತಾದ್, ಮೊಯಿದೀನ್ ಉಸ್ತಾದ್,ಮೊಹಮ್ಮದ್ ಉಸ್ತಾದ್, ಸಮೀರ್, ನಸೀರ್, ಹನೀಫಾ, ಸಿದ್ದೀಕ್, ನೌಶಾದ್, ಸಲ್ಮಾನ್ ಸೇರಿದಂತೆ ಮತ್ತಿತರರು ಇದ್ದರು.

error: Content is protected !!