ಬೆಣ್ಣೆ ಕಡುಬು ಮಾಡುವ ವಿಧಾನ

January 9, 2021

ಕರ್ನಾಟಕದ “ಕಾಶ್ಮೀರ” ಎನಿಸಿರುವ ಕೊಡಗು ಪ್ರಕೃತಿಯ ಸೌಂದರ್ಯಕ್ಕೆ ಮಾತ್ರ ಸೀಮಿತವಲ್ಲ, ಅಡುಗೆಯಲ್ಲು ವಿಶೇಷತೆಯನ್ನು ಹೊಂದಿದೆ. ಕೊಡಗು ಎಂದೊಡನೆ ನೆನಪಾಗುವ ಹಾಗೂ ಘಮಘಮಿಸುವ ಮೊದಲ ಅಡುಗೆ “ಬೆಣ್ಣೆ ಕಡುಬು ಹಾಗೂ ಪಂದಿ ಕರಿ”.

ಬೇಕಾಗುವ ಸಾಮಾಗ್ರಿಗಳು: ಅಕ್ಕಿ ತರಿ – 2 ಕಪ್ , ತುಪ್ಪ – 2 ಟೇಬಲ್ ಸ್ಪೂನ್, ಉಪ್ಪು – ರುಚಿಗೆ ತಕ್ಕಷ್ಟು, ನೀರು – 4 ಕಪ್

ಮಾಡುವ ವಿದಾನ : ಮೊದಲಿಗೆ ಒಂದು ಪಾತ್ರೆಯಲ್ಲಿ 4 ಕಪ್ ನೀರು ಹಾಕಿ ಕುದಿಯಲು ಬಿಡಿ, ಕುದಿಯುತ್ತಿರುವ ನೀರಿಗೆ ರುಚಿಗೆ ತಕ್ಕಷ್ಟು ಉಪ್ಪು ಹಾಗೂ 2 ಟೇಬಲ್ ಸ್ಪೂನ್ ತುಪ್ಪ ಹಾಕಿ ಕದಡಿ ನಂತರ ಅಕ್ಕಿ ತರಿಯನ್ನು ನಿದಾನವಾಗಿ ಸ್ವಲ್ಪ ಸ್ವಲ್ಪ ಹಾಕಿ ತಿರುವಬೇಕು ನಂತರ ಸಣ್ಣ ಉರಿಯಲ್ಲಿ ಹಿಟ್ಟು ಹದಕ್ಕೆ ಬರುವವರೆಗೆ ಬೆಯಲು ಬಿಡಿ,
ನಂತರ ಸಣ್ಣಸಣ್ಣ ಉಂಡೆಗಳನ್ನಾಗಿ ಮಾಡಿ ಕಡುಬು ಪಾತ್ರೆ(ಕಳಸಿಗೆ) ಯಲ್ಲಿ 5 ರಿಂದ 10 ನಿಮಿಷಗಳವರೆಗೆ ಬೆಯಿಸಿ. ಈಗ ರುಚಿಯಾದ”ಬೆಣ್ಣೆ ಕಡುಬು” ಸವಿಯಲು ಸಿದ್ದ.

error: Content is protected !!