ವಿರಾಜಪೇಟೆಯ ಅರಸು ನಗರದಲ್ಲಿ ನೂತನ ಕಾಂಕ್ರಿಟ್ ರಸ್ತೆ ಉದ್ಘಾಟನೆ

January 9, 2021

ವಿರಾಜಪೇಟೆ, ಜ 9 : ವಿರಾಜಪೇಟೆಯ ವಾರ್ಡ್ 2ರ ಅರಸುನಗರದಲ್ಲಿ ಪ್ರಮುಖ ರೂ. 6 ಲಕ್ಷದಲ್ಲಿ ನಿರ್ಮಾಣವಾಗಿರುವ ಸುಸಜ್ಜಿತ ಕಾಂಕ್ರೀಟ್ ರಸ್ತೆಯನ್ನು ಪ.ಪಂ. ಸದಸ್ಯ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ ಉದ್ಘಾಟಿಸಿ ಸಾರ್ವಜನಿಕರಿಗೆ ಮುಕ್ತಗೊಳಿಸಿದರು.

ನಂತರ ಮಾತನಾಡಿದ ಅವರು ಗ್ರಾಮಸ್ಥರ ಹಿತದೃಷ್ಠಿಯಿಂದ ಪ್ರಾಕೃತಿ ವಿಕೋಪದ ಅನುದಾನದಡಿಯಲ್ಲಿ ರೂ. 06 ಲಕ್ಷ ವೆಚ್ಚದಲ್ಲಿ ಸುಸಜ್ಜಿತವಾದ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗಿದೆ ಎಂದರು.
ಮಳೆಗಾಲದಲ್ಲಿ ಬೆಟ್ಟದ ತುದಿಯ ಅಂಚಿನಲ್ಲಿ ಸಣ್ಣ ಸಣ್ಣ ಜರಿಗಳು ಒಂದುಗೂಡಿ ಜಲಪಾತದಂತೆ ಹರಿಯುತ್ತಿದ್ದ ಮೆಳೆಯನೀರು ಮೋರಿಯಿಂದ ಸರಾಗವಾಗಿ ಹರಿಯಲು ಸಾಧ್ಯವಾಗದೆ ಮನೆಗಳ ಒಳನುಗ್ಗಿ ಮನೆಗಳು ಕುಸಿಯುವ ಹಂತವನ್ನು ತಲುಪಿತ್ತು. ಇದನ್ನು ಮನಗಂಡು ಮೋರಿಯನ್ನು ಅಗಲೀಕರಣಗೊಳಿಸಿ ನೂತನವಾಗಿ ಮೋರಿ ನಿರ್ಮಾಣ ಮಾಡಲಾಗಿದೆ ಎಂದರು.
ಅಲ್ಲದೇ ಬೆಟ್ಟ ಹತ್ತಲು ಉಪಯೋಗವಾಗುವಂತೆ ಮೇಟ್ಟಿಲುಗಳ ನಿರ್ಮಾಣ, ಕುಡಿಯುವ ನೀರಿನ ವ್ಯವಸ್ಥೆಗಾಗಿ ಹೊಸದಾಗಿ ಪೈಪ್ ಲೈನ್ ಅಳವಡಿಕೆ ಮತ್ತು ಇತರ ಕಾಮಾಗಾರಿಗಳು ಪ್ರಗತಿಹಂತದಲ್ಲಿದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭ ಕಾಂಗ್ರೆಸ್ ನಗರಾಧ್ಯಕ್ಷ ಜಿ.ಜಿ.ಮೊಹನ್ ಕುಮಾರ್, ಮಹಿಳಾ ನಗರಾಧ್ಯಕ್ಷೆ ದಿವ್ಯ ಹಾಗೂ ಪ್ರಮುಖರಾದ ಬಿಷನ್ ವಾಜ್, ರಾಜು, ಬಿಲ್ಟನ್ ವಾಜ್, ಸೆಬಾಸ್ಟೀನ್, ಸಮಾಜಿಕ ಕಾರ್ಯಕರ್ತ ಶಭರಿಶ್ ಮತ್ತು ಅರಸುನಗರ ನಿವಾಸಿಗಳು ಹಾಜರಿದ್ದರು.

error: Content is protected !!