ಕೊಡಗು ಬಿಜೆಪಿ ಮುಖಂಡ ಮೋಹನ್ ಮೊಣ್ಣಪ್ಪ ಇನ್ನಿಲ್ಲ

January 9, 2021

ಮಡಿಕೇರಿ ಜ.9 : ಜಿಲ್ಲಾ ಬಿಜೆಪಿ ಮುಖಂಡ ಹಾಗೂ ಕೊಡಗು ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆಯ ಪ್ರಮುಖ ಮೋಹನ್ ಮೊಣ್ಣಪ್ಪ (55) ಅವರು ನಿಧನರಾಗಿದ್ದಾರೆ.
ಸೋಮವಾರಪೇಟೆಯಲ್ಲಿ ಸಭೆಯೊಂದರಲ್ಲಿ ಪಾಲ್ಗೊಂಡಿದ್ದ ಸಂದರ್ಭ ಹೃದಯಾಘಾತಕ್ಕೊಳಗಾಗಿ ಅವರು ವಿಧಿ ವಶವಾಗಿದ್ದಾರೆ.
ಜಿಲ್ಲಾ ಬಿಜೆಪಿ ಖಜಾಂಜಿಯಾಗಿ, ಕೌಂಟಿ ಕ್ಲಬ್ ಅಧ್ಯಕ್ಷರಾಗಿ, ವಿಜಯ ವಿನಾಯಕ ದೇವಾಲಯದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದ ಮೋಹನ್ ಮೊಣ್ಣಪ್ಪ ಅವರ ನಿಧನಕ್ಕೆ ಜಿಲ್ಲಾ ಬಿಜೆಪಿ ಕಂಬನಿ ಮಿಡಿದಿದೆ.

error: Content is protected !!