ವಿಕಾಸ್ ಜನಸೇವಾ ಟ್ರಸ್ಟ್ ಜೀವನದಾರಿ ಆಶ್ರಮಕ್ಕೆ ವಾಷಿಂಗ್ ಮಿಷನ್ ಕೊಡುಗೆ

January 9, 2021

ಸುಂಟಿಕೊಪ್ಪ,ಜ.9: ಗದ್ದೆಹಳ್ಳದ ವಿಕಾಸ್ ಜನಸೇವಾ ಟ್ರಸ್ಟ್ ಜೀವನದಾರಿ ಆಶ್ರಮಕ್ಕೆ ಕುಶಾಲನಗರ ರೋಟರಿ ಸಂಸ್ಥೆ ವತಿಯಿಂದ ವಾಷಿಂಗ್ ಮಿಷನ್ ಹಾಗೂ ಗ್ರೈಂಡರ್ ಅನ್ನು ಕೊಡುಗೆಯಾಗಿ ನೀಡಿದರು.
ಕುಶಾಲನಗರ ರೋಟರಿ ಸಂಸ್ಥೆಯ ಅಧ್ಯಕ್ಷರಾದ ಚಂದ್ರಶೇಖರ್, ಜಲ್ಲಾ ರೋಟರಿ ಸಂಸ್ಥೆಯ ರಾಜ್ಯಪಾಲರಾದ ರಂಗನಾಥ್, ಜಿಲ್ಲಾ ಕಾರ್ಯದರ್ಶಿ ವಿಕ್ರಂ ದತ್ತ ವಿಕಾಸ್ ಜನಸೇವಾ ಟ್ರಸ್ಟ್ ಜೀವನದಾರಿ ಆಶ್ರಮಕ್ಕೆ ಭೇಟಿ ನೀಡಿ ಆಶ್ರಮದಲ್ಲಿ ಆಶ್ರಯ ಪಡೆದಿರುವ 23 ಮಂದಿ ನೆಲೆಸಿದ್ದು ಅಂಗವಿಲಕರು ಹಾಗೂ ವಯೋವೃದ್ಧರ ಯೋಗ ಕ್ಷೇಮ ವಿಚಾರಿಸಿದರು.
ಜೀವನದಾರಿ ಆಶ್ರಮದ ನಿವಾಸಿಗಳಿಗೆ ಅವಶ್ಯವಾಗಿರುವ ವಾಶಿಂಗ್ ಮಿಶಿನ್ ಹಾಗೂ ಗ್ರೈಂಡರ್ ಅನ್ನು ಕೊಡುಗೆಯಾಗಿ ನೀಡಿ ಆಶ್ರಮದ ಮೇಲ್ವಿಚಾರಕರಾದ ರಮೇಶ್ ಮತ್ತು ಕುಟುಂಬ ವರ್ಗದವರ ಸೇವೆಯನ್ನು ಮುಕ್ತಕಂಠದಿಂದ ಪ್ರಶಂಸಿದರು.
ಕುಶಾಲನಗರ ರೋಟರಿ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಆಶ್ರಮ ಬಂದುಗಳೊಂದಿಗೆ ಬೆಳಗ್ಗಿನ ಉಪಹಾರವನ್ನು ಸವಿದರು.
ಈ ಸಂದರ್ಭ ರೊ.ಕೃಷ್ಣಶೈಣೈ, ಉಲ್ಲಾಸ್ ಕೃಷ್ಣ,ಪೆಮ್ಮಯ್ಯ, ಜೇಕಬ್,ಪ್ರೇಮ್ ಚಂದ್ರÀನ್,ಹಿರಿಯ ರೋಟೇರಿಯನ್‍ರಾದ ಸತೀಶ ಎಸ್.ಕೆ., ಡಾ.ಹರಿಶೆಟ್ಟಿ ಹಾಗೂ ವಿಕಾಸ್ ಜನಸೇವಾ ಟ್ರಸ್ಟ್ ಜೀವನದಾರಿ ಆಶ್ರಮದ ಅಧ್ಯಕ್ಷ ಹಾಗೂ ಮೇಲ್ವಿಚಾರಕರಾದ ರಮೇಶ್ ಆಶ್ರಮ ನಿವಾಸಿಗಳು ಇದ್ದರು.

error: Content is protected !!