ಕೊಡ್ಲಿಪೇಟೆಯಲ್ಲಿ ಸದಾಶಿವ ಸ್ವಾಮೀಜಿ ಪದವಿಪೂರ್ವ ಕಾಲೇಜಿನ ಗ್ರಂಥಾಲಯ ಹಾಗೂ ಪ್ರಯೋಗಾಲಯ ಕಟ್ಟಡಕ್ಕೆ ಶಂಕುಸ್ಥಾಪನೆ

09/01/2021

ಮಡಿಕೇರಿ ಜ. 9 : ಶಿಕ್ಷಣದೊಂದಿಗೆ ಸಂಸ್ಕಾರವೂ ದೊರೆತರೆ ಮಾನವೀಯತೆ ಉಳಿಯಲು ಸಾಧ್ಯವೆಂದು ಸಿದ್ದಗಂಗಾ ಮಠಾಧೀಶ ಶ್ರೀ ಸಿದ್ದಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು.
ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಆಶ್ರಯದಲ್ಲಿ ನಡೆಯುತ್ತಿರುವ ಸದಾಶಿವ ಸ್ವಾಮೀಜಿ ಪದವಿಪೂರ್ವ ಕಾಲೇಜಿನಲ್ಲಿ ರೂ. 25 ಲಕ್ಷ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಗ್ರಂಥಾಲಯ ಹಾಗೂ ಪ್ರಯೋಗಾಲಯ ದ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಇಂದು ಶಾಲಾ ಕಾಲೇಜುಗಳು ಜನರನ್ನು ವಿದ್ಯಾವಂತರನ್ನಾಗಿ ಮಾಡುತ್ತಿವೆ ಆದರೆ ಮಾನವೀಯ ಮೌಲ್ಯಗಳು, ಸಂಸ್ಕಾರಗಳು ಮರೆಯಾಗುತ್ತಿವೆ. ಶಿಕ್ಷಣ ಕ್ಷೇತ್ರದಲ್ಲಿ ಭಾರಿ ಪೈಪೆÇೀಟಿ ನಡೆಯುತ್ತಿವೆ ಬಹಳಷ್ಟು ಶಿಕ್ಷಣ ಸಂಸ್ಥೆಗಳು ಪ್ರಾರಂಭವಾಗುತ್ತಿವೆ. ಪೆÇೀಷಕರು ತಮ್ಮ ಮಕ್ಕಳನ್ನು ಯಾವ ಶಾಲೆಗೆ ಸೇರಿಸಬೇಕೆಂದು ಗೊಂದಲಕ್ಕೆ ಒಳಗಾಗುವಷ್ಟು ವಿದ್ಯಾಸಂಸ್ಥೆಗಳಿವೆ ಎಂದರು.
ವಿದ್ಯಾವಂತರಿಂದ ಸಮಾಜ ಬಹಳಷ್ಟು ನಿರೀಕ್ಷಿತದೆ ಆದರೆ ಇಂದು ಪರಿಸರ ಏನಾಗಿದೆ ಇದಕ್ಕೆ ಕಾರಣವೇನು ಎಂಬುದು ನಮ್ಮೆಲ್ಲರಿಗೂ ಅರಿವಿದೆ. ಹಿಂದೆ ಸಂಸ್ಕಾರವಿತ್ತು ಸಮಾಜ,ಪರಿಸರದ ಬಗ್ಗೆ ಕಾಳಜಿ ಇತ್ತು ಎಂದು ವಿಶ್ಲೇಷಿಸಿ ದರು.
ಶಿಕ್ಷಣವೂ ಮುಖ್ಯ ಅದರೊಂದಿಗೆ ಸಂಸ್ಕಾರ,ಮಾನವೀಯ ಮೌಲ್ಯಗಳು ಮೈಗೂಡಿಸಿಕೊಂಡು ಉತ್ತಮ ಸಮಾಜದ ನಿರ್ಮಾಣ ಮಾಡಬೇಕಾಗಿದೆ ಎಂದರು.
ಕೊಡಗುಜಿಲ್ಲೆಯಲ್ಲೂ ಅರಮೇರಿಕಳಂಚೇರಿ, ಕಿರಿಕೊಡ್ಲಿ, ಕಲ್ಲು ಮಠಗಳು ವಿದ್ಯಾಸಂಸ್ಥೆಗಳನ್ನು ನಡೆಸುತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಕೊಡ್ಲಿಪೇಟೆಯ ಮಹಡಿ ಮನೆ ಕುಟುಂಬದವರು ದಾನವಾಗಿ ನೀಡಿದ ಜಾಗದಲ್ಲಿ ಸದಾಶಿವ ಸ್ವಾಮೀಜಿ ವಿದ್ಯಾಪೀಠ ಹೆಮ್ಮರವಾಗಿ ಬೆಳೆಯುತ್ತಿದೆ,35 ಮಕ್ಕಳಿಂದ ಆರಂಭವಾದ ಸಂಸ್ಥೆಯಲ್ಲಿ ಇಂದು 750 ಮಕ್ಕಳು ವಿದ್ಯಾಭ್ಯಾಸ ನಡೆಸು ತಿರುವುದು ಶ್ಲಾಘನೀಯ ವೆಂದರು.
ಗ್ರಾಮೀಣ ಭಾಗದಲ್ಲಿ ಶಾಲೆಗಳನ್ನು ತೆರೆಯುವ ಮೂಲಕ ಈ ಭಾಗದ ವಿದ್ಯಾರ್ಥಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರುತಿರುವುದು ಮಠಗಳಿಗೆ ಹೆಮ್ಮೆಎಂದರು.
ಕಾರ್ಯಕ್ರಮದಲ್ಲಿ ಅರಮೇರಿಕಳಂಚೇರಿ ಮಠಾಧೀಶ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಕಿರಿಕೊಡ್ಲಿ ಮಠಾಧೀಶ ಹಾಗೂ ವಿದ್ಯಾಸಂಸ್ಥೆಯ ಅದ್ಯೆಕ್ಷರಾದ ಸದಾಶಿವ ಸ್ವಾಮೀಜಿ, ಶಿಡಿಗಳಲೇ ಮಠಾಧೀಶ ಇಮ್ಮಡಿಶಿವ ಲಿಂಗ ಸ್ವಾಮೀಜಿ,ಕೊಡಗುಜಿಲ್ಲಾ ವೀರಶೈವ ಮಹಾಸಭಾ ಅದ್ಯೆಕ್ಷ ಶಿವಪ್ಪ,ಕೊಡಗುಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅದ್ಯೆಕ್ಷ ಎಸ್.ಮಹೇಶ್, ಮಲೆನಾಡು ವೀರಶೈವ ಮಹಾಸಭಾದ ಪ್ರಮುಖರಾದ ವಿದ್ಯಾಶಂಕರ್, ದೇವರಾಜು, ಬಸವಣ್ಣ, ಲೋಹಿತ್ ಹಾಗೂ ಮುಂತಾದವರು ಉಪಸ್ಥಿತರಿದ್ದರು.
ಈ ಸಂದರ್ಭ ಗ್ರಾ.ಪಂ ಚುನಾವಣೆಯಲ್ಲಿ ಜಯಗಳಿದವರನ್ನು ಸನ್ಮಾನಿಸಲಾಯಿತು.