ಕೂಡುಮಂಗಳೂರು ಚಿಕ್ಕತ್ತೂರು ಗ್ರಾಮದಲ್ಲಿ ದಂಪತಿ ನೇಣಿಗೆ ಶರಣು

January 10, 2021

ಮಡಿಕೇರಿ ಜ.10 : ದಂಪತಿ ನೇಣಿಗೆ ಶರಣಾಗಿರುವ ಘಟನೆ ಕುಶಾಲನಗರ ಸಮೀಪದ ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ಗಾರೆ ಮಣಿ ಎಂಬವರ ಮಗ ಶ್ರೀಧರ್(39) ಹಾಗೂ ಆತನ ಪತ್ನಿ ಶೃತಿ (26) ಎಂಬವರೇ ನೇಣಿಗೆ ಶರಣಾದವರಾಗಿದ್ದಾರೆ.
ತಮ್ಮ ಮನೆಯ ಸಮೀಪದಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿದ್ದ ಮನೆಯ ತೊಲೆಗೆ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮದುವೆ ಅಗಿ ಎರಡು ವರ್ಷಗಳು ಕಳೆದಿದ್ದು, ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.
ಸ್ಧಳಕ್ಕೆ ಕುಶಾಲನಗರ ಡಿವೈಎಸ್ ಪಿ ಶೈಲೇಂದ್ರ, ಕುಶಾಲನಗರ ಪೊಲೀಸ್ ವೃತ್ತ ನಿರೀಕ್ಷಕ ಮಹೇಶ್ ಕುಮಾರ್, ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಶಿವಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!