ದಂತ ವೈದ್ಯಕೀಯದಲ್ಲಿ ಬಿ.ಶೆಟ್ಟಿಗೇರಿಯ ಕೆ.ಎಸ್.ತೇಜಸ್ವಿ ಸಾಧನೆ

January 10, 2021

ಮಡಿಕೇರಿ ಜ.10 : 2019 ಜೂನ್ ತಿಂಗಳಲ್ಲಿ ನಡೆದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿಯ ದಂತ ವೈದ್ಯಕೀಯ ವಿಜ್ಞಾನ ಅಂತಿಮ ವರ್ಷದ ಪರೀಕ್ಷೆಯಲ್ಲಿ ಜಿಲ್ಲೆಯ ಕೆ.ಎಸ್.ತೇಜಸ್ವಿ ಉತ್ತಮ ಸಾಧನೆ ತೋರಿದ್ದಾರೆ.
ಬ್ಯಾಚುಲರ್ ಆಫ್ ಡೆಂಟಲ್ ಸೈನ್ಸ್ ಪರೀಕ್ಷೆಯಲ್ಲಿ ಪೆರಿಯೋಡೊನೊಟಲಜಿ ವಿಭಾಗದಲ್ಲಿ ಶೇ.87 ಅಂಕದೊಂದಿಗೆ ರಾಜ್ಯಕ್ಕೆ ದ್ವಿತೀಯ ಸ್ಥಾನ ಹಾಗೂ ಪಿಡಿಯಾಟ್ರಿಕ್ & ಪ್ರಿವೆಂಟಿವ್ ಡೆಂಟಿಸ್ಟ್ರಿ ವಿಷಯದಲ್ಲಿ ಶೇ 80 ರಾಜ್ಯಕ್ಕೆ 9ನೇ ಸ್ಥಾನ ಗಳಿಸಿದ್ದಾರೆ.
ಕೆ.ಎಸ್.ತೇಜಸ್ವಿ ಮಂಗಳೂರಿನ ಶ್ರೀನಿವಾಸ ಇನ್ಸ್‍ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್ ವಿದ್ಯಾರ್ಥಿನಿಯಾಗಿದ್ದು ಮೂಲತಃ ಕೊಡಗಿನ ಬಿ.ಶೆಟ್ಟಿಗೇರಿಯ ಕರ್ತೂರ ಸೋಮಯ್ಯ ಮತ್ತು ವಾಣಿ ದಂಪತಿಯ ಪುತ್ರಿ.

error: Content is protected !!