ಮೂರ್ನಾಡುವಿನಲ್ಲಿ MPL SESSION 3 ಕಾಲ್ಚೆಂಡು ಪಂದ್ಯಾಟ : ಕುಶನ್ ಫ್ರೆಂಡ್ಸ್ ತಂಡ ಚಾಂಪಿಯನ್

January 11, 2021

ಮಡಿಕೇರಿ ಜ.11 : ಮೂರ್ನಾಡುವಿನ ಜೂನಿಯರ್ ಕಾಲೇಜು ಮೈದಾನದಲ್ಲಿ ಎಂಪಿಎಲ್ ಸೆಷನ್ 3 ಕಾಲ್ಚೆಂಡು ಪಂದ್ಯಾವಳಿ ನಡೆಯಿತು.
ಲೀಗ್ ಹಂತದ ಪಂದ್ಯಾಟದಲ್ಲಿ 4 ತಂಡಗಳು ಸೆಮಿಫೈನಲ್ ಹಂತಕ್ಕೆ ಪ್ರವೇಶಿಸಿತು. ಮೊದಲನೇ ಸೆಮಿಫೈನಲ್ ಪಂದ್ಯದಲ್ಲಿ ಟೀಮ್ ಎಂಟಿಸಿ ತಂಡ ಬ್ಲಾಕ್ ಈಗಲ್ ತಂಡವನ್ನು 2-1 ಅಂತರದಿಂದ ಪರಾಭವಗೊಳಿಸಿ ಫೈನಲ್ ಹಂತಕ್ಕೆ ಪ್ರವೇಶಿಸಿತು.
ಎರಡನೇ ಸೆಮಿಫೈನಲ್ ಪಂದ್ಯದದಲ್ಲಿ ಕುಶನ್ ಫ್ರೆಂಡ್ಸ್ ತಂಡ ಟೀಮ್ ಎಫೆÇ್ರೀನ್ ತಂಡವನ್ನು 3-1 ಅಂತರದಲ್ಲಿ ಸೋಲಿಸಿ ಫೈನಲ್ ಪ್ರವೇಶಿಸಿತು. ಅಂತಿಮ ಪಂದ್ಯಾಟದಲ್ಲಿ ಕುಶನ್ ಫ್ರೆಂಡ್ಸ್ ತಂಡ ಟೀಮ್ ಎಂಟಿಸಿ ತಂಡವನ್ನು 3-1 ಅಂತರದಲ್ಲಿ ಸೋಲಿಸಿ ಚಾಂಪಿಯನ್ ಪಟ್ಟ ತನ್ನದಾಗಿಸಿಗೊಂಡಿತು.

error: Content is protected !!