ಜ.13- 14 ರಂದು ಸಚಿವ ಸಂಪುಟ ವಿಸ್ತರಣೆ : ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ

11/01/2021

ಬೆಂಗಳೂರು ಜ. 11 : ಜನವರಿ 13 ಅಥವಾ 14 ರಂದು ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ತಿಳಿಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, 13 ಅಥವಾ 14 ರಂದು ಪ್ರಮಾಣವಚನ ಬಹುತೇಕ ನಿಗದಿಯಾಗಿದೆ ಎಂದಿದ್ದಾರೆ. ಆದರೆ ವರಿಷ್ಠರು ರಾಜ್ಯಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಅವರ ಜೊತೆಗೆ ಚರ್ಚೆ ನಡೆಸಿ ದಿನ ನಿಗದಿ ಮಾಡುತ್ತೇನೆ ಎಂದಿದ್ದಾರೆ. ವಿಸ್ತರಣೆ ಮಾಡಬೇಕೋ ಅಥವಾ ಪುನಾರಚನೆ ಮಾಡಬೇಕೋ ಎಂಬುವುದು ರಾಷ್ಟ್ರೀಯ ಅಧ್ಯಕ್ಷರು ಹಾಗೂ ರಾಜ್ಯ ಉಸ್ತುವಾರಿಗಳ ಭೇಟಿ ಬಳಿಕ ನಿಗದಿಯಾಗಲಿದೆ ಎಂದು ತಿಳಿಸಿದ್ದಾರೆ. ಈ ಹಿನ್ನಲೆಯಲ್ಲಿ ಸಂಪುಟ ವಿಸ್ತರಣೆಯ ಬಗ್ಗೆ ಮತ್ತೆ ಅನುಮಾನಗಳು ಕಾಡಲು ಶುರುವಾಗಿದೆ.