ಗೋಣಿಕೊಪ್ಪಲಿನಲ್ಲಿ ನಿಸರ್ಗ ಜೆಸಿಐ ದಶಮಾನೋತ್ಸವ ಲಾಂಛನ ಅನಾವರಣ

January 11, 2021

ಪೊನ್ನಂಪೇಟೆ, ಜ. 11 : ಜೆಸಿಐ ಪೊನ್ನಂಪೇಟೆ ನಿಸರ್ಗ (ನಿಸರ್ಗ ಜೇಸಿಸ್) ಘಟಕದ ದಶಮಾನೋತ್ಸವದ ಲಾಂಛನವನ್ನು ಅನಾವರಣಗೊಳಿಸಲಾಯಿತು.

ಘಟಕದ ‘ದಶಮಾನೋತ್ಸವ’ ಆಚರಣೆಯ ಹಿನ್ನೆಲೆಯಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಈ ಲಾಂಛನವನ್ನು ಗೋಣಿಕೊಪ್ಪಲಿನ ಎ.ಪಿ.ಎಂ.ಸಿ. ಸಭಾಂಗಣದಲ್ಲಿ ನಡೆದ ಘಟಕದ ’10ನೇ ಘಟಕಾಡಳಿತ ಮಂಡಳಿ ಪದಾಧಿಕಾರಿಗಳ ಪದಸ್ವೀಕಾರ ಸಮಾರಂಭ’ದಲ್ಲಿ ಭಾರತೀಯ ಜೇಸಿಸ್ ನ ವಲಯ 14ರ ವಲಯಾಧ್ಯಕ್ಷ ಭರತ್ ಆಚಾರ್ಯ ಅನಾವರಣಗೊಳಿಸಿದರು.

2021ನೇ ಸಾಲಿನಲ್ಲಿ ದಶಮಾನೋತ್ಸವದ ಸಂಭ್ರಮದಲ್ಲಿರುವ ಪೊನ್ನಂಪೇಟೆ ನಿಸರ್ಗ ಜೇಸಿಸ್, ಈ ಪ್ರಯುಕ್ತ ಹಲವಾರು ಜನೋಪಯೋಗಿ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ನಿರ್ಧರಿಸಿದೆ. ಅದಕ್ಕಾಗಿ ಈ ಕುರಿತ ರೂಪುರೇಷೆಗಳು ಸಿದ್ಧಗೊಳ್ಳುತ್ತಿದೆ ಎಂದು ಅಧ್ಯಕ್ಷರಾದ ಎಂ. ಎನ್. ವನಿತ್ ಕುಮಾರ್ ಅವರು ಈ ಸಂದರ್ಭದಲ್ಲಿ ತಿಳಿಸಿದರು.

ಲಾಂಛನ ಅನಾವರಣ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಬಿ.ಜಿ. ಅನಂತಶಯನ, ವಲಯ ಉಪಾಧ್ಯಕ್ಷ ಎಂ.ಬಾಬು ಸೇರಿದಂತೆ ಘಟಕದ ಸ್ಥಾಪಕ ಅಧ್ಯಕ್ಷ ರಫೀಕ್ ತೂಚಮಕೇರಿ, ನಿಕಟಪೂರ್ವ ಅಧ್ಯಕ್ಷ ಎ.ಎಸ್. ಟಾಟು ಮೊಣ್ಣಪ್ಪ, ಕಾರ್ಯದರ್ಶಿ ಎ.ಪಿ. ದಿನೇಶ್ ಕುಮಾರ್, ಘಟಕದ ಜೇಸಿರೇಟ್ ವಿಭಾಗದ ಮುಖ್ಯಸ್ಥೆ ಕುಪ್ಪಂಡ ಜಸ್ಮಿ ಬೋಪಣ್ಣ ಮೊದಲಾದವರು ಉಪಸ್ಥಿತರಿದ್ದರು.

error: Content is protected !!