ಕೊಂಡಂಗೇರಿಯಲ್ಲಿ ಜ.12 ರಂದು ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಪ್ರಯುಕ್ತ ರಕ್ತದಾನ ಶಿಬಿರ

11/01/2021

ಮಡಿಕೇರಿ ಜ.11 : ಭಾರತ ಸರ್ಕಾರ, ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ಮಡಿಕೇರಿ ನೆಹರು ಯುವ ಕೇಂದ್ರ, ರೆಡ್ ಕ್ರಾಸ್ ಸೋಸೈಟಿ ಹಾಗೂ ಕೊಂಡಂಗೇರಿಯ ಯುವಕ ಸಂಘ ಇವರ ವತಿಯಿಂದ ದಿವ್ಯಚೇತನ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಅಂಗವಾಗಿ ರಾಷ್ಟ್ರೀಯ ಯುವ ದಿನ ಹಾಗೂ ಯುವ ಸಪ್ತಾಹದ ಉದ್ಘಾಟನಾ ಸಮಾರಂಭ ಪ್ರಯುಕ್ತ ರಕ್ತದಾನ ಶಿಬಿರವು ಜನವರಿ, 12 ರಂದು ಬೆಳಗ್ಗೆ 10.30 ಗಂಟೆಗೆ ಕೊಂಡಂಗೇರಿಯಲ್ಲಿ ನಡೆಯಲಿದೆ.
ಸಿದ್ದಾಪುರ ಪಿ.ಎಸ್.ಐ. ಮೋಹನ್‍ರಾಜ್, ಕೊಂಡಂಗೇರಿ ಯುವ ಸಂಘದ ಅಧ್ಯಕ್ಷರಾದ ನಾಸಿರ್, ಕೊಂಡಂಗೇರಿ ಸರ್ಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ಮಹೇಂದ್ರ, ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ರವಿಕುಮಾರ್, ಒಂಟಿಯಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಹೇಮಾವತಿ, ಹಾಲುಗುಂದ ಪಿಡಿಒ ಸೆಲ್ವಿನ್ ಜಯಕುಮಾರ್ ಇತರರು ಪಾಲ್ಗೊಳ್ಳಲಿದ್ದಾರೆ.