ದೇವಾಟ್ ಪರಂಬುವಿನಲ್ಲಿ ಸಿಎನ್‍ಸಿ ಯಿಂದ ಸ್ಮಾರಕ ಅನಾವರಣ

11/01/2021

ಮಡಿಕೇರಿ ಜ. 11 : ಸಿಎನ್‍ಸಿ ವತಿಯಿಂದ ದೇವಾಟ್ ಪರಂಬುವಿನಲ್ಲಿ “ಕೊಡವ ನರಮೇಧ” ಸ್ಮಾರಕ ಅನಾವರಣಗೊಳಿಸಲಾಯಿತು.
ಸಿಎನ್‍ಸಿ ಅಧ್ಯಕ್ಷ ನಂದಿನೆರವಂಡ ನಾಚಪ್ಪ ಮಾತನಾಡಿ 1785 ಡಿಸೆಂಬರ್ 12 ರಂದು ಸಹಸ್ರಾರು ಕೊಡವರನ್ನು ಟಿಪ್ಪು ಸುಲ್ತಾನ್ ದೇವಾಟ್ ಪರಂಬುವಿನಲ್ಲಿ ಹತ್ಯೆಗೈದಿದ್ದನು. ಈ ನರಮೇಧದಲ್ಲಿ ಅಗಲಿದ ಹಿರಿಯರಿಗೆ ಸಿಎನ್‍ಸಿ ವತಿಯಿಂದ ನಿರಂತರ ಗೌರವ ಸಲ್ಲಿಸುತ್ತಾ ಬಂದಿದ್ದು, ಇದೀಗ ಸ್ಮಾರಕವನ್ನು ಅನಾವರಣಗೊಳಿಸಲಾಗಿದೆ. ಸ್ಮಾರಕವನ್ನು ರಕ್ಷಿಸುವುದು ಸಂವಿಧಾನಿಕ ಕರ್ತವ್ಯವಾಗಿದೆ ಎಂದರು.
ಸಿಎನ್‍ಸಿ ಪ್ರಮುಖರಾದ ಕಲಿಯಂಡ ಪ್ರಕಾಶ್, ಪುಲ್ಲೆರ ಕಾಳಪ್ಪ, ಮಂಡೇಪಂಡ ಮನೋಜ್ ಮಂದಣ್ಣ, ಪುಲ್ಲೆರ ಹರ್ಷ ಬೋಪಯ್ಯ, ಅರೆಯಡ ಗಿರೀಶ್, ಪಾಸುರ ರಾಜ ಚಂಗಪ್ಪ, ಬೊಟ್ಟಂಗಡ ಗಿರೀಶ್, ಅಜ್ಜಿಕುಟ್ಟಿರ ಲೋಕೇಶ್ ಹಾಗೂ ಇತರರು ಇದ್ದರು.