ಅಯ್ಯಂಗೇರಿ ಗ್ರಾ.ಪಂ ಸದಸ್ಯರಾಗಿ ಎನ್.ಎಸ್.ಯು.ಐ ಉಪಾಧ್ಯಕ್ಷ ರಾಶಿದ್ ಆಯ್ಕೆ

January 11, 2021

ಮಡಿಕೇರಿ: ಗ್ರಾ. ಪಂ. ಚುನಾವಣೆಯಲ್ಲಿ ಅಯ್ಯಂಗೇರಿ ವಾರ್ಡ್ 2 ರಿಂದ ಸ್ಪರ್ಧಿಸಿದ್ದ ಉತ್ಸಾಹಿ ಯುವಕ ಎನ್.ಎಸ್.ಯು.ಐ ಜಿಲ್ಲಾ ಉಪಾಧ್ಯಕ್ಷ 235 ಮತಗಳನ್ನು ಪಡೆಯುವುದರ ಮೂಲಕ ಗೆಲುವು ಸಾಧಿಸಿದ್ದಾರೆ.

ರಾಶಿದ್ ಅಯ್ಯಂಗೇರಿ 2ರ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಇವರ ವಿರುದ್ಧ ಎಲ್ಲಾ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಕಣಕ್ಕಿಳಿದಿದ್ದರು.

ಎನ್.ಎಸ್.ಯು.ಐ ಜಿಲ್ಲಾ ಉಪಾಧ್ಯಕ್ಷ ರಾಶಿದ್ ಮಾತನಾಡಿ, ನನ್ನ‌ ಗ್ರಾಮಸ್ಥರು ನನಗೆ ಎಲ್ಲಾ ರೀತಿಯ ಬೆಂಬಲ, ಸಹಕಾರ ನೀಡಿ ನನ್ನನ್ನು ಗೆಲ್ಲಿಸಿದ್ದಾರೆ. ಅಯ್ಯಂಗೇರಿ ಗ್ರಾಮದ ಎನ್.ಎಸ್.ಯು.ಐ ಯುವಕರು ನನ್ನ ಗೆಲುವಿಗಾಗಿ ಹಗಲಿರುಳು ದುಡಿದಿದ್ದಾರೆ.
ಗ್ರಾಮದ ಎಲ್ಲಾ ಯುವಕರು ನನ್ನೊಂದಿಗೆ ಕೈ ಜೋಡಿಸಿದ್ದಾರೆ‌. ನನ್ನ ಗೆಲುವು ನನ್ನ ಗ್ರಾಮದ ಜನರ ಗೆಲುವು.
ಗ್ರಾಮದ ಅಭಿವೃದ್ಧಿಗೆ ಮೊದಲ ಆದ್ಯತೆ ಎಂದು ಹೇಳಿದರು.

error: Content is protected !!