ಕೆ.ನಿಡುಗಣೆ ಗ್ರಾ.ಪಂ ನೂತನ ಸದಸ್ಯರುಗಳಿಗೆ ಸನ್ಮಾನ

11/01/2021

ಮಡಿಕೇರಿ ಜ.11 : ಕೆ.ನಿಡುಗಣೆ ಗ್ರಾ.ಪಂ ನ ನೂತನ ಸದಸ್ಯರುಗಳಾದ ಜಾನ್ಸನ್ ಪಿಂಟೋ, ಪ್ರಮಿಳಾ ಸುರೇಶ್, ಅನಿತಾ ಪ್ರಮೋದ್ ಹಾಗೂ ಪುಷ್ಪಲತಾ ಪ್ರೇಮ್ ಕುಮಾರ್ ಅವರುಗಳನ್ನು ಸಿಸಿಎಂ ಆರ್.ಆರ್ ಕ್ರಿಕೆಟರ್ಸ್ ಮತ್ತು ಪ್ರಿಯ ಬಾಯ್ಸ್ ಜಂಟಿ ಆಶ್ರಯದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಎರಡು ಸಂಘಟನೆಗಳ ವತಿಯಿಂದ ಆಯೋಜಿಸಲಾಗಿದ್ದ ಕರ್ಣಂಗೇರಿ ಫೋರ್ ಬಾಲ್ ಕ್ರಿಕೆಟ್ ಪಂದ್ಯಾವಳಿಯ ಸಭಾ ಕಾರ್ಯಕ್ರಮದಲ್ಲಿ ನೂತನ ಸದಸ್ಯರುಗಳನ್ನು ಸನ್ಮಾನಿಸಲಾಯಿತು. ವಿಜೇತ ತಂಡಗಳಿಗೆ ಅತಿಥಿಗಳು ಬಹುಮಾನ ವಿತರಿಸಿದರು.
ಪ್ರಮುಖರಾದ ಯೋಗಾನಂದ, ಎಂ.ಕೆ.ಶಾಫಿ, ಮನು, ಮಂಜು, ಅನಿಲ್ ಮತ್ತಿತರರು ಉಪಸ್ಥಿತರಿದ್ದರು. ಸ್ಥಳೀಯ ಪ್ರಮುಖರಾದ ಎಂ.ಎ.ರಜಾಕ್ ಅವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.