ಕೊಡಗಿನಲ್ಲಿ ಕೋವಿಡ್ : ಸಕ್ರಿಯ ಪ್ರಕರಣಗಳು 70

January 11, 2021

ಮಡಿಕೇರಿ ಜ.11 : ಜಿಲ್ಲೆಯಲ್ಲಿ ಸೋಮವಾರ 14 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದೆ. ಜಿಲ್ಲೆಯಲ್ಲಿನ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 5880 ಆಗಿದ್ದು, 5730 ಮಂದಿ ಗುಣಮುಖರಾಗಿದ್ದಾರೆ. 70 ಸಕ್ರಿಯ ಪ್ರಕರಣಗಳಿದ್ದು, 80 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್‍ಮೆಂಟ್ ವಲಯಗಳ ಸಂಖ್ಯೆ 49 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
4 ಪ್ರಕರಣಗಳು ಆರ್‍ಟಿಪಿಸಿಆರ್ ಪರೀಕ್ಷೆಯ ಮೂಲಕ ಮತ್ತು ಮಡಿಕೇರಿ ತಾಲ್ಲೂಕಿನಲ್ಲಿ 11 ಹೊಸ ಕೋವಿಡ್-19 ಪ್ರಕರಣಗಳು ಕಂಡುಬಂದಿದೆ. ಈ 11 ಪ್ರಕರಣಗಳು ಆರ್‍ಟಿಪಿಸಿಆರ್ ಪರೀಕ್ಷೆಯ ಮೂಲಕ ದೃಢಪಟ್ಟಿದೆ.
ವಿರಾಜಪೇಟೆ ತಾಲ್ಲೂಕಿನಲ್ಲಿ 03 ಹೊಸ ಕೋವಿಡ್-19 ಪ್ರಕರಣಗಳು ಕಂಡು ಬಂದಿದೆ. ಈ ಪೈಕಿ 03 ಪ್ರಕರಣಗಳು ಆರ್‍ಟಿಪಿಸಿಆರ್ ಪರೀಕ್ಷೆಯ ಮೂಲಕ ದೃಢಪಟ್ಟಿದೆ.

error: Content is protected !!