ಜನರು ಬಿಜೆಪಿಗೆ ಏಕೆ ವೋಟ್‌ ಕೊಡುತ್ತಿದ್ದಾರೆ : ಕಿಮ್ಮನೆ ರತ್ನಾಕರ್

January 12, 2021

ತೀರ್ಥಹಳ್ಳಿ: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ರೈತರ 50 ಸಾವಿರ ರೂಪಾಯಿ ಸಾಲಮನ್ನಾ ಮಾಡಿದೆ. ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಕ್ಕೆ 5ಲಕ್ಷ ರೂಪಾಯಿ, ಮಕ್ಕಳಿಗೆ ಉಚಿತ ಶಿಕ್ಷಣ ನೀಡಿದೆ. ಕೃಷಿ ಕಾರ್ಮಿಕರು, ಜನಸಾಮಾನ್ಯರಿಗೆ ಅನೇಕ ಕಾರ‍್ಯಕ್ರಮ ಜಾರಿಗೊಳಿಸಿದೆ. ಬಿಜೆಪಿ ಸರಕಾರ ಏನೂ ಮಾಡಿಲ್ಲ. ಆದರೂ ಜನರು ಬಿಜೆಪಿಗೆ ಓಟು ಕೊಡುತ್ತಿದ್ದು ಏಕೆ ಎಂಬುದೆ ಅರ್ಥವಾಗುತ್ತಿಲ್ಲ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಹೇಳಿದ್ದಾರೆ.

ಪಟ್ಟಣದ ಗಾಯಿತ್ರಿ ಮಂದಿರದಲ್ಲಿ ಗ್ರಾ.ಪಂ. ಚುನಾವಣೆಯಲ್ಲಿಆಯ್ಕೆಗೊಂಡ ಕಾಂಗ್ರೆಸ್‌, ಸಮಾನ ಮನಸ್ಕರ ಅಭಿನಂದನಾ ಸಭೆಯನ್ನು ಸೋಮವಾರ ಉದ್ದೇಶಿಸಿ ಅವರು ಮಾತನಾಡಿದ ಅವರು ಬಿಜೆಪಿ ನೇತೃತ್ವದ ಕೇಂದ್ರ, ರಾಜ್ಯ ಸರಕಾರದ ಆಡಳಿತದಲ್ಲಿ ಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲ, ಕಬ್ಬಿಣ, ಸಿಮೆಂಟ್‌, ದಿನಸಿ ಸಾಮಗ್ರಿ ಬೆಲೆ ಏರಿಕೆ ಆಗಿದ್ದರೂ ಜನರು ಬೀದಿಗಿಳಿದು ಹೋರಾಟ ಮಾಡುತ್ತಿಲ್ಲ. 8 ತಿಂಗಳಿನಿಂದ ಸಂಧ್ಯಾಸುರಕ್ಷಾ, ಅಂತ್ಯಸಂಸ್ಕಾರ ಯೋಜನೆಯಡಿ ಹಣ ಬಿಡುಗಡೆ ಆಗುತ್ತಿಲ್ಲ ಎಂದು ಕಿಮ್ಮನೆ ರತ್ನಾಕರ್‌ ಹೇಳಿದರು.

error: Content is protected !!