ಹೆಬ್ಬಲೆ ಗ್ರಾಮದಲ್ಲಿ ನೈರ್ಮಲ್ಯ ಸಾಕ್ಷರತಾ ಅಭಿಯಾನ ಕಾರ್ಯಾಗಾರ

January 12, 2021

ಮಡಿಕೇರಿ ಜ. 12: ಮೈಸೂರಿನ ಓಡಿಪಿ ಸಂಸ್ಥೆ ಹಾಗೂ ಬೆಂಗಳೂರಿನ ನಬಾರ್ಡ್ ವತಿಯಿಂದ ಸೋಮವಾರಪೇಟೆ ತಾಲೂಕಿನ ಹೆಬ್ಬಲೆ ಗ್ರಾಮದಲ್ಲಿ ನೈರ್ಮಲ್ಯ ಸಾಕ್ಷರತಾ ಅಭಿಯಾನ ಕಾರ್ಯಗಾರವನ್ನು ನಡೆಸಲಾಯಿತು.

ಹೆಬ್ಬಲೆ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ನಬಾರ್ಡಿನ ಕೊಡಗು ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ಪಿ. ವಿ. ಶ್ರೀನಿವಾಸ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ದೇಶದ ಪ್ರಮುಖ ಯೋಜನೆಯಾದ, ಸ್ವಚ್ಚಭಾರತ ಅಭಿಯಾನದಡಿ ವಾಶ್ (ವಾಟರ್ ಏಂಡ್ ಸಾನಿಟೇಷನ್) ಸಾಕ್ಷರತಾ ಅಭಿಯಾನವನ್ನು ಕರ್ನಾಟಕ ರಾಜ್ಯದ 100 ಹಳ್ಳಿಗಳಲ್ಲಿ ಹಮ್ಮಿಕೊಳ್ಳಲಾಗಿದೆ. ಕೊಡಗಿನಲ್ಲಿ ಈ ಕಾರ್ಯಕ್ರಮಗಳನ್ನು ಓಡಿಸಿ ಸಂಸ್ಥೆಯ ಸಹಯೋಗದೊಂದಿಗೆ ಸೋಮವಾರಪೇಟೆಯ 5 ಜಲನಯನ ಕ್ಷೇತ್ರಗಳಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.
ಇದರ ಮುಖ್ಯ ಉದ್ದೇಶ ಸಮುದಾಯ ಮತ್ತು ವೈಯಕ್ತಿಕ ನೈರ್ಮಲ್ಯತೆಯನ್ನು ಕಾಪಾಡುವುದರ ಮೂಲಕ ದೇಶವನ್ನು ಆರೋಗ್ಯಕರ ಸಮಾಜವನ್ನಾಗಿ ಪರಿವರ್ತಿಸುವುದು ಎಂದು ಹೇಳಿದರು. ವಯಕ್ತಿಕ ಅರೋಗ್ಯದಿಂದ ಸಮುದಾಯದ ಆರೋಗ್ಯದ ಡೆಗೆ ನಮ್ಮ ಪಯಣ ಆಗಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಇಲಾಖೆಯ ಶ್ರಿಮತಿ ಸಾವಿತ್ರವ್ವ,, ಮಾತನಾಡಿ, ಸ್ವಚ್ಛತೆಯ ಜೊತೆಗೆ ಸಾಮೂಹಿಕ ಸ್ವಚ್ಛತೆಯನ್ನು ಕಾಪಡುವ ಮೂಲಕ ಮಹಿಳೆಯರು ಮತ್ತು ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿಬೇಕು ಎಂದರು.
ಪ್ರತಿಯೊಬ್ಬರು ತಮ್ಮ ಮನೆಯಲ್ಲಿ ಶೌಚಾಲಯ ಬಳಸಬೇಕು, ಹೊಸ ಹೊಸ ರೋಗಗಳು ಹರಡದಂತೆ ಸಮಯಕ್ಕೆ ಸರಿಯಾಗಿ ತಪಾಸಣೆ ಮಾಡಬೇಕು, ಉತ್ತಮ ಪೌಷ್ಟಿಕ ಆಹಾರವನ್ನು ಸೇವಿಸಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಕರೆ ನೀಡಿದರು. ಸರ್ಕಾರವು ಹಲವಾರು ವರ್ಷಗಳಿಂದ ಜನರ ಆರೋಗ್ಯ ಮಟ್ಟ ಸುಧಾರಿಸಲು ವಿವಿಧ ಕಾರ್ಯಕ್ರಮಗಳನ್ನು ಯೋಜನೆಗಳನ್ನು ನೀಡುತ್ತಾ ಬಂದಿದೆ. ಮಹಿಳಾ ಮತ್ತು ಮಕ್ಕಳ ಇಲಾಖೆಯಿಂದ ದೊರೆಯುವ ಸವಲತ್ತುಗಳ ಬಗ್ಗೆ ತಿಳಿಸಿದರು ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಹೆಚ್ಚಿನ ಗಮನ ನೀಡಬೇಕು ಎಂದರು.
ಅಲ್ಲದೆ ವೈಯಕ್ತಿಕ ಸ್ವಚ್ಛತೆಯ ಜೊತೆಗೆ ಸಾಮೂಹಿಕ ಸ್ವಚ್ಛತೆಯನ್ನು ಕಾಪಡುವ ಮೂಲಕ ಮಹಿಳೆಯರು ಮತ್ತು ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿಬೇಕು ಎಂದರು.
ಪ್ರತಿಯೊಬ್ಬರು ತಮ್ಮ ಮನೆಯಲ್ಲಿ ಶೌಚಾಲಯ ಬಳಸಬೇಕು, ಹೊಸ ಹೊಸ ರೋಗಗಳು ಹರಡದಂತೆ ಸಮಯಕ್ಕೆ ಸರಿಯಾಗಿ ತಪಾಸಣೆ ಮಾಡಬೇಕು, ಉತ್ತಮ ಪೌಷ್ಟಿಕ ಆಹಾರವನ್ನು ಸೇವಿಸಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಕರೆ ನೀಡಿದರು.
ಕಾರ್ಯ ಕ್ರಮದಲ್ಲಿ ಆರೋಗ್ಯ ಇಲಾಖೆಯ ಶ್ರೀಮತಿ ಅಕ್ಕಮ್ಮ ಅವರು ಮಹಿಳೆಯರಿಗೆ ಇರುವ ಯೋಜನೆಗಳ ಬಗ್ಗೆ ತಿಳಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಓಡಿಪಿ ಸಂಸ್ಥೆಯ ಗ್ರಾಮ ವಿಕಾಸ ಪುರುಷ ಒಕ್ಕೂಟದ ಸಂಯೋಜಕ ಜಾನ್ ಬಿ. ರಾಡ್ರಿಗಸ್ ಮಾತಾನಾಡಿ, ದೇಶವು ಅಭಿವೃದ್ಧಿ ಪಥದಲ್ಲಿ ಸಾಗಬೇಕಾದರೆ ಆರೋಗ್ಯಕರ ಸಮಾಜವನ್ನು ನಿರ್ಮಿಸಬೇಕು, ನೈರ್ಮಲ್ಯತೆ ಜೀವನದ ಒಂದು ಪ್ರಮುಖ ಭಾಗ. ಮನುಷ್ಯನ ಜೀವನದಲ್ಲಿ ಅತ್ಯಂತ ಶ್ರೇಷ್ಟ ಸಂಪತ್ತೆಂದರೆ ಆರೋಗ್ಯ, ದೇಶವು ವೈಜ್ಞಾನಿಕವಾಗಿ ಆರ್ಥಿಕವಾಗಿ ಎಷ್ಟು ಮುಂದುವರಿದರು ಜನರ ಆರೋಗ್ಯ ಮಟ್ಟ ಸುಧಾರಿಸದಿದ್ದರೆ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಗಾಂಧಿಜೀಯವರು ಹೇಳಿದಂತೆ ದೇಶದ ಅಭಿವೃದ್ಧಿಯು ದೇಶದ ತಾಂತ್ರಿಕತೆಯ ಮೇಲೆ ಅಲ್ಲ ನೈರ್ಮಲ್ಯತೆ ಮೇಲೆ ಅವಲಂಬಿತವಾಗಿದೆ. ಈ ನಿಟ್ಟಿನಲ್ಲಿ ಎಲ್ಲರು ವೈಯಕ್ತಿಕ ಮತ್ತು ಸಾಮೂಹಿಕ ಸ್ವಚ್ಛತೆಗೆ ಗಮನ ಹರಿಸುವಂತೆ ಸಲಹೆ ನೀಡಿದರು.

ಪ್ರತಿಯೊಬ್ಬರು ಆರೋಗ್ಯದ ದೃಷ್ಟಿಯಿಂದ ಶೌಚಾಲಯವನ್ನು ಉಪಯೋಗಿಸಬೇಕು. ಅಹಾರ, ನೀರು, ಗಾಳಿ, ಬೆಳಕು ಇವುಗಳನ್ನು ಮಲೀನ ಗೊಳಿಸದೆ ಸ್ವಚ್ಚವಾಗಿ ಪಡೆಯಬೇಕು. ಮನೆಗೊಂದು ಶೌಚಾಲಯ, ಊರಿಗೊಂದು ದೇವಾಲಯ. ಇದರಂತೆ ಪ್ರತಿಯೊಬ್ಬ ಮನುಷ್ಯನ ಆರೋಗ್ಯದ 4 ಮಜಲುಗಳಾದ ದೈಹಿಕ, ಮಾನಸಿಕ, ಆಧ್ಯಾತ್ಮಿಕ ಮತ್ತು ಸಾಮಾಜಿಕ ಆರೋಗ್ಯವನ್ನು ಕಾಪಾಡಿದರೆ ಪರಿಸರವು ನಮಗೆ ಉತ್ತಮ ಆರೋಗ್ಯವನ್ನು ಕೊಡಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಪ್ರಕೃತಿಯನ್ನು ಮಲಿನಗೊಳಿಸದೆ ನೀರು, ಗಾಳಿ, ಬೆಳಕು, ಆಹಾರ ಇವುಗಳನ್ನು ಉಳಿಸಲು ಎಲ್ಲಾರು ಕಂಕಣಬದ್ದರಾಗಬೇಕು ಎಂದು ಕರೆ ನೀಡಿದರು. ಕಾರ್ಯ ಕ್ರಮದಲ್ಲಿ ಬಾಗವಹಿಸಿದ ಸದಸ್ಯರಿಗೆ ನಬಾರ್ಡ್ ನ ಡಿ. ಡಿ ಎಮ್ ಉಚಿತವಾಗಿ ಮಾಸ್ಕ್ ವಿತರಣೆ ಮಾಡಿದರು.
ಕಾರ್ಯಕ್ರಮದಲ್ಲಿ ಓ.ಡಿ.ಪಿ. ಕಾರ್ಯಕರ್ತರಾದ ಸುಂದರ್ ದಾಸ್, ಮಮತ, ಶ್ರೀ ಸ್ವಾಮಿ ಹಾಗೂ 60 ಗ್ರಾಮಸ್ಥರು ಹಾಜರಿದ್ದರು.

error: Content is protected !!