ಜ.15 ರಂದು ‘ಪುಣ್ಯಕೋಟಿ’ ವಾಣಿಜ್ಯ ಸಂಕೀರ್ಣ ಉದ್ಘಾಟನೆ

January 12, 2021

ಮಡಿಕೇರಿ ಜ.12 : ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ 75 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ‘ಪುಣ್ಯಕೋಟಿ’ ವಾಣಿಜ್ಯ ಸಂಕೀರ್ಣ ಹಾಗೂ ಅತಿಥಿ ಗೃಹ ಉದ್ಘಾಟನಾ ಸಮಾರಂಭ ಜ.15 ರಂದು ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 7 ಗಂಟೆಗೆ ಶಕ್ತಿ ದಿನ ಪತ್ರಿಕೆಯ ಪ್ರಧಾನ ಸಂಪಾದಕ ಜಿ.ರಾಜೇಂದ್ರ ಅವರು ಪಶುಪತಿನಾಥ, ನಂದಿ, ಶ್ರೀಕೃಷ್ಣ, ಪುಣ್ಯಕೋಟಿ ಮೂರ್ತಿಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ ಎಂದರು.
ಬೆಳಿಗ್ಗೆ 10 ಗಂಟೆಗೆ ಶ್ರೀ ನರೇಂದ್ರ ಮೋದಿ ರೈತ ಸಹಕಾರ ಭವನದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಭಜರಂಗದಳದ ಕರ್ನಾಟಕ ದಕ್ಷಿಣ ಪ್ರಾಂತ ಸಹ ಸಂಯೋಜಕ ರಘೂಜಿ, ವಕೀಲ ಪಿ. ಕೃಷ್ಣಮೂರ್ತಿ, ಮಡಿಕೇರಿ ಗಣೇಶ್ ಮೆಡಿಕಲ್ಸ್ ಮಾಲೀಕರಾದ ಡಿ.ಐ.ಪುರುಷೋತ್ತಮ, ಉದ್ಯಮಿ ಹಾಗೂ ಕಾಫಿ ಬೆಳೆಗಾರರಾದ ಚೇರಳತಮ್ಮಂಡ ಎ. ಮುದ್ದಯ್ಯ, ಕಾಫಿ ಬೆಳೆಗಾರರಾದ ಎಂ.ಎಸ್. ಮಹೇಂದ್ರ ಹಾಗೂ ಎಂ.ಎಂ. ಹೇಮ, ಸುಂಟಿಕೊಪ್ಪ ವಿಜಯ ಪ್ಲಾಂಟೇಶನ್‍ನ ಎಸ್.ಜಿ.ಶ್ರೀನಿವಾಸ್ ಹಾಗೂ ವಿಜಯಲಕ್ಷ್ಮಿ ಪಾಲ್ಗೊಳ್ಳಲಿದ್ದಾರೆಂದರು.
ವಾಣಿಜ್ಯ ಸಂಕೀರ್ಣ ಮತ್ತು ಅತಿಥಿ ಗೃಹ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ, ಹಿರಿಯ ಸಹಕಾರಿ ಹಾಗೂ ಮಾಜಿ ಸಚಿವ ಎಂ.ಸಿ. ನಾಣಯ್ಯ, ವಿಧಾನ ಪರಿಷತ್ ಸದಸ್ಯರಾದ ಎಂ.ಪಿ. ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನ ಅಧ್ಯಕ್ಷ ಕೊಡಂದೇರ ಪಿ. ಗಣಪತಿ, ಉಪಾಧ್ಯಕ್ಷ ಕೇಟೋಳಿರ ಎಸ್. ಹರೀಶ್ ಪೂವಯ್ಯ, ಸಹಕಾರ ಸಂಘಗಳ ಉಪನಿಂಬಂಧಕ ಬಿ.ಕೆ. ಸಲೀಂ, ಸಹಾಯಕ ನಿಂಬಂಧಕ ಹೆಚ್.ಡಿ. ರವಿಕುಮಾರ್ ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು.

error: Content is protected !!