ಬೈಲುಕೊಪ್ಪ ಹೊಟೇಲ್ ನಲ್ಲಿ ದಾಂಧಲೆ : ಹಲ್ಲೆ ಮಾಡಿದವರ ಬಂಧನಕ್ಕೆ ಆಗ್ರಹ

January 12, 2021

ಮಡಿಕೇರಿ ಜ.12 : ಇತ್ತೀಚೆಗೆ ಕೆಲವು ಯುವಕರ ಗುಂಪು ಹೋಟೆಲ್ ವೊಂದಕ್ಕೆ ನುಗ್ಗಿ ಕ್ಷುಲ್ಲಕ ಕಾರಣಕ್ಕೆ ಹೋಟೆಲ್‍ನಲ್ಲಿದ್ದವರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿ ಹಲ್ಲೆಗೊಳಗಾದವರು ಬೈಲುಕೊಪ್ಪ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು.
ಘಟನೆ ನಡೆದು ಹಲವು ದಿನಗಳಾದರೂ ಆರೋಪಿಗಳನ್ನು ಬಂಧಿಸಿ ಸೂಕ್ತ ಕಾನೂನು ಕ್ರಮಕೈಗೊಳ್ಳುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಹಲ್ಲೆಗೊಳಗಾದ ಶಬ್ಬೀರ್, ರಿಜ್ವಾನ್, ಸಲ್ಮಾನ್ ಸೇರಿದಂತೆ ಸ್ಥಳೀಯರು ಆರೋಪಿಸಿದರು.
ಈ ಬಗ್ಗೆ ಮಾತನಾಡಿದ ಬೈಲುಕೊಪ್ಪ ಗ್ರಾ.ಪಂ ಸದಸ್ಯ ದಾವುದ್, ಸುಮಾರು 10 ಮಂದಿ ಯುವಕರ ಗುಂಪು ಕೆಲವು ಅಮಾಯಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಆದರೆ ಪೊಲೀಸರು ಇಲ್ಲಿಯವರೆಗೆ ಅವರನ್ನು ಬಂಧಿಸದೆ ಇರುವುದು ವಿಷಾದಕರವೆಂದರು. ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

error: Content is protected !!