ಸೋಮವಾರಪೇಟೆಯಲ್ಲಿ ರೂ. 20 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಾಸಕ ಅಪ್ಪಚ್ಚು ರಂಜನ್ ಚಾಲನೆ

12/01/2021

ಮಡಿಕೇರಿ ಜ.12 : ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಮಂಗಳವಾರ ಸೋಮವಾರಪೇಟೆ ತಾಲ್ಲೂಕಿನ ದೊಡ್ಡಮಳ್ತೆ, ದುಂಡಳ್ಳಿ, ಹಂಡ್ಲಿ, ಬ್ಯಾಡಗೊಟ್ಟ, ಕೊಡ್ಲಿಪೇಟೆ, ಬೆಸೂರು, ನಿಡ್ತ ಮತ್ತು ಆಲೂರು ಸಿದ್ದಾಪುರದಲ್ಲಿ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದರು.
ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಜನವರಿ, 13 ರಂದು ಮಾದಾಪುರದ ಇಗ್ಗೋಡ್ಲು ಪ.ಪಂ. ಕಾಲೋನಿಗೆ 18.50 ಲಕ್ಷ ರೂ. ಕಾಂಕ್ರೀಟ್ ರಸ್ತೆ ನಿರ್ಮಾಣ, ಹರದೂರಿನ ಗರಗಂದೂರು ಅಂಬೇಡ್ಕರ್ ಪ.ಜಾ ಕಾಲೋನಿಗೆ 10.05 ಲಕ್ಷ ರೂ. ಕಾಂಕ್ರೀಟ್ ರಸ್ತೆ ನಿರ್ಮಾಣ, ಚೆಟ್ಟಳ್ಳಿಯ ವಾಲ್ನೂರು ಮುಖ್ಯ ರಸ್ತೆಯಿಂದ ಕೂಡ್ಲೂರು ಚೆಟ್ಟಳ್ಳಿ ಪ.ಪಂ. ಕಾಲೋನಿಗೆ 10 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ, ನೆಲ್ಲಿಹುದಿಕೇರಿಯ ಬೆಟ್ಟದ ಕಾಡು ಪ.ಜಾತಿ ಕಾಲೋನಿಯ ಬಾಬು ಮನೆಯಿಂದ ರಾಜು ಮನೆವರೆಗೆ 18 ಲಕ್ಷ ರೂ.ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಮತ್ತು ವಾಲ್ನೂರು ತ್ಯಾಗತ್ತೂರು ಅಭ್ಯತ್‍ಮಂಗಲ ಪೈಸಾರಿ ಪ.ಜಾತಿ ಕಾಲೋನಿಯ ಉಮೇಶ್ ಮನೆಯಿಂದ ಹರೀಶ್ ಮನೆವರೆಗೆ 14 ಲಕ್ಷ ರೂ.ನಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಶಾಸಕರು ಚಾಲನೆ ನೀಡಲಿದ್ದಾರೆ.