ವಿರಾಜಪೇಟೆಯ ಶೋಭಿತಾಗೆ ಕನ್ನಡ ರತ್ನ ಪ್ರಶಸ್ತಿ ಪ್ರದಾನ

12/01/2021

ಮಡಿಕೇರಿ ಜ.12 : ವಿರಾಜಪೇಟೆಯ ಅಂಬಟ್ಟಿ ಬಡಾವಣೆಯ ನಿವಾಸಿಗಳಾದ ಗಣೇಶ್ ಹಾಗೂ ಸುಮ ದಂಪತಿಗಳ ಪುತ್ರಿ, ಭರತ ನಾಟ್ಯ ಕ್ಷೇತ್ರದ ಪ್ರತಿಭೆ ಬಿ.ಜಿ.ಶೋಭಿತಾಗೆ ರಾಷ್ಟ್ರೀಯ ಕನ್ನಡ ರತ್ನ ಪ್ರಶಸ್ತಿ ಲಭಿಸಿದೆ.
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ನಯನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ಕನ್ನಡ ಸಂಘದ ವತಿಯಿಂದ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶೋಭಿತಾ ವಿರಾಜಪೇಟೆಯ ನಾಟ್ಯ ಮಯೂರಿ ನೃತ್ಯ ಶಾಲೆಯ ವಿದುಷಿ ಪೇಮಾಂಜಲಿ ಆಚಾರ್ಯ ಅವರ ಶಿಷ್ಯೆ.