ಶಾಂತಳ್ಳಿ ಗ್ರಾಮದ ಫಲಾನುಭವಿಗಳಿಗೆ ಮಾಸಾಶನ ಮತ್ತು ವಾಕರ್ ವಿತರಣೆ

12/01/2021

ಸೋಮವಾರಪೇಟೆ ಜ.12 : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸಮೀಪದ ಶಾಂತಳ್ಳಿ ಗ್ರಾಮದ ವಿಕಲಚೇತನ ಮಹಿಳೆಗೆ ಮಾಸಾಶನ ಹಾಗೂ ವಾಕರ್ ಸ್ಟ್ಯಾಂಡ್ ವಿತರಿಸಲಾಯಿತು.
ಶಾಂತಳ್ಳಿಯ ನಿರ್ಗತಿಕ ಹಾಗೂ ವಿಕಲಚೇತನ ಮಹಿಳೆಯಾದ ಗಂಗಮ್ಮ ಅವರಿಗೆ ಶ್ರೀ ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ನಿರ್ದೇಶನದಂತೆ ಪ್ರತಿ ತಿಂಗಳು ರೂ.750 ಮಾಸಾಶನ ನೀಡಲಾಗುವುದು. ಇದರೊಂದಿಗೆ ನಡೆದಾಡಲು ವಾಕರ್ ಸ್ಟ್ಯಾಂಡ್ ನೀಡಲಾಗಿದ್ದು, ಇದನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಯೋಜನೆಯ ಮೇಲ್ವಿಚಾರಕ ಸುಬ್ರಹ್ಮಣ್ಯ ತಿಳಿಸಿದರು.
ಈ ಸಂದರ್ಭ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷ ಪ್ರವೀಣ್ ಉಪಸ್ಥಿತರಿದ್ದರು.