ಕದನೂರು ಗ್ರಾಮದ ಮಿಲನ್ಯ ಎಸ್.ಶೆಟ್ಟಿಗೆ ಕನ್ನಡ ರತ್ನ ಪ್ರಶಸ್ತಿ

January 13, 2021

ಮಡಿಕೇರಿ ಜ.13 : ವಿರಾಜಪೇಟೆಯ ಕದನೂರು ಗ್ರಾಮದ ಬಿ ಬ್ಲಾಕ್‍ನ ಸೆಂಟ್ ಮೇರಿಸ್ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿನಿ ಮಿಲನ್ಯ ಎಸ್.ಶೆಟ್ಟಿಗೆ ರಾಷ್ಟ್ರೀಯ ಕನ್ನಡ ರತ್ನ ಪ್ರಶಸ್ತಿ ಲಭಿಸಿದೆ.
ಇವರು ಹೆಗ್ಗಳ ಗ್ರಾಮದ ಶಿವಕುಮಾರ್ ಹಾಗೂ ಬಿ.ಎ.ಮಮತಾ ಶೆಟ್ಟಿ ದಂಪತಿಯ ಪುತ್ರಿ ಹಾಗೂ ನಾಟ್ಯ ಮಯೂರಿ ಶಾಲೆಯ ಭರತನಾಟ್ಯ ವಿದುಷಿ ಪ್ರೇಮಾಂಜಲಿ ಆಚಾರ್ಯರ ಶಿಷ್ಯೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ನಯನ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ನಡೆಯಿತು.

error: Content is protected !!