ಗೃಹರಕ್ಷಕ ದಳದ ಅಧಿಕಾರಿ ಎಸಿಬಿ ಬಲೆಗೆ : ಸೋಮವಾರಪೇಟೆಯಲ್ಲಿ ಪ್ರಕರಣ

January 13, 2021

ಮಡಿಕೇರಿ ಜ.13 : ಸೋಮವಾರಪೇಟೆ ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಗೃಹ ರಕ್ಷಕದಳ ಸಿಬ್ಬಂದಿಯಿಂದ ಒಂದು ಸಾವಿರ ರೂ. ಲಂಚ ಪಡೆಯುತ್ತಿದ್ದ ಗೃಹರಕ್ಷಕ ದಳದ ಘಟಕಾಧಿಕಾರಿಯನ್ನು ಎಸಿಬಿ ಬುಧವಾರ ಬಂಧಿಸಿದೆ.
ಘಟಕಾಧಿಕಾರಿ ರುದ್ರಪ್ಪ ಬಂಧಿತ ಆರೋಪಿಯಾಗಿದ್ದಾರೆ. ಇವರ ಅಧೀನದಲ್ಲಿದ್ದ ಸಿಬ್ಬಂದಿಗಳು ಪ್ರತಿ ತಿಂಗಳು ತಲಾ ಒಂದು ಸಾವಿರ ಲಂಚ ನೀಡಬೇಕಾಗಿತ್ತು. ಲಂಚ ನೀಡದಿದ್ದರೆ ಬೇರೆಡೆ ಎತ್ತಂಗಡಿ ಮಾಡುವ ಬೆದರಿಕೆ ಹಾಕುತ್ತಿದ್ದರು ಎನ್ನಲಾಗಿದೆ. ಇದರಿಂದ ಬೇಸತ್ತ ಸಿಬ್ಬಂದಿ ಸುನಿಲ್ ಎಸಿಬಿಗೆ ದೂರು ನೀಡಿದ್ದರು.
ಖಾಸಗಿ ಬಸ್ ನಿಲ್ದಾಣದ ರಾಘವೇಂದ್ರ ಕ್ಯಾಂಟಿನ್ ಬಳಿ, ಒಂದು ಸಾವಿರ ರೂ., ಲಂಚ ಪಡೆಯುತ್ತಿದ್ದ ಸಂದರ್ಭದಲ್ಲೇ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಅರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಡಿವೈಎಸ್‍ಪಿ ಸದಾನಂದ ತಿಪ್ಪಣ್ಣನವರ್, ಸರ್ಕಲ್ ಇನ್ಸ್‍ಪೆಕ್ಟರ್ ಶ್ರೀಧರ್, ಪೊಲೀಸ್ ಇನ್ಸ್‍ಪೆಕ್ಟರ್ ಶಿಲ್ಪಾ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.

error: Content is protected !!