ಸುಂಟಿಕೊಪ್ಪದಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ

January 13, 2021

ಸುಂಟಿಕೊಪ್ಪ,ಜ.13: ದೇಶವು ಮರೆಯಲಾಗದ ಚೇತನ, ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆಯನ್ನು ದೇಶದಾದ್ಯಂತ ರಾಷ್ಟೀಯ ಯುವ ದಿನವನ್ನಾಗಿ ಆಚರಿಸುತ್ತಿರುವುದು ಯುವಜನತೆಯ ಮೇಲೆ ವಿವೇಕಾನಂದರು ಇಟ್ಟಿದ ಭರವಸೆಯನ್ನು ಪುಷ್ಠೀಕರಿಸುತ್ತದೆ ಎಂದು ಕಾಲೇಜು ಪ್ರಾಂಶುಪಾಲರಾದ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಪಿ.ಎಸ್.ಜಾನ್ ಹೇಳಿದರು.
ಸರಕಾರಿ ಪದವಿ ಪೂರ್ವಕಾಲೇಜಿನಲ್ಲಿ ವಿವೇಕಾನಂದರ ಜನ್ಮದಿನಾಚರಣೆಯ ಅಂಗವಾಗಿ ರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಯಿತು.
ಮುಖ್ಯ ಭಾಷಣಕರರಾಗಿ ಆಗಮಿಸಿದ್ದ ರಾಜ್ಯಶಾಸ್ತ್ರ ಉಪನ್ಯಾಸಕರಾದ ಮಹೇಶ್ ಮಾತನಾಡಿ ಯುವ ಮನಸ್ಸುಗಳು ಒಂದು ದೇಶದ ಪ್ರತಿಷ್ಠಿತ ಸಂಪತ್ತು, ದೇಶದ ಸಿರಿವಂತಿಕೆ ಬರುವಂತೆ ಮಾಡುತ್ತದೆ. ಆದೇಶದಲ್ಲಿ ನೆಲೆಸಿರುವ ಯುವಜನತೆಯ ಕಾರ್ಯವೈಖರಿಯಿಂದ, ಹೀಗೆ ಇವರು ವಿವೇಕಾನಂದರ ಪ್ರೇರಣಾ ನುಡಿಗಳನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಎಸ್.ಎಚ್.ಈಶ, ಸುಕನ್ಯಾ, ಕೆ. ಕವಿತಾ ಭಕ್ತಾ, ಕೆ.ಸಿ.ಕವಿತಾ, ಜಯಶ್ರೀ, ಕಾವ್ಯ, ತಸ್ಮಿಯಾ, ಸಮಾರಂಭ ಆಯೋಜಕರಾದ ಜಯಶ್ರೀ ಮತ್ತಿತರರು ಇದ್ದರು.
ಎಸ್.ಎಚ್.ಈಶ ನಿರೂಪಿಸಿ, ಸುಕಾನ್ಯ ವಂದಿಸಿದರು.

error: Content is protected !!