ಬಿಜೆಪಿಯಿಂದ ಐಗೂರು ಗ್ರಾ.ಪಂ. ನೂತನ ಸದಸ್ಯರಿಗೆ ಸನ್ಮಾನ

January 13, 2021

ಸುಂಟಿಕೊಪ್ಪ,ಜ.13: ಐಗೂರು ಗ್ರಾ.ಪಂಚಾಯಿತಿಗೆ ನೂತನವಾಗಿ ಆಯ್ಕೆಗೊಂಡ ಸದಸ್ಯರುಗಳಿಗೆ ಬಿಜೆಪಿ ವತಿಯಿಂದ ಅಭಿನಂದನಾ ಕಾರ್ಯಕ್ರಮ ನಡೆಯಿತು.

ಐಗೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಮಡಿಕೇರಿ ಕ್ಷೇತ್ರ ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ 7 ಮಂದಿ ನೂತನ ಸದಸ್ಯರಿಗೆ ಹೂವಿನ ಹಾರ, ಶಾಲು ಹೊದಿಸಿ ಬಿಜೆಪಿ ಪಕ್ಷದ ವತಿಯಿಂದ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಮನುಕುಮಾರ್ ರೈ, ಶಕ್ತಿ ಕೇಂದ್ರ ಅಧ್ಯಕ್ಷ ಮಚ್ಚಂಡ ಪ್ರಕಾಶ್, ಜಿಲ್ಲಾ ಪಂಚಾಯಿತಿ ಸದಸ್ಯ ಪೂರ್ಣಿಮಾ ಗೋಪಾಲ್, ತಾಲೂಕು ಪಂಚಾಯಿತಿ ಸದಸ್ಯರಾದ ಸಬೀತ ಚನ್ನಕೇಶವ, ಕೃಷಿ ಉತ್ಪನ್ನ ಮಾರುಕಟ್ಟೆ ಮಾಜಿ ಅಧ್ಯಕ್ಷ ಡಿ.ಎಸ್.ಪೊನ್ನಪ್ಪ, ಶರತ್ಚಂದ್ರ, ಎಂ.ಎ.ಪ್ರಭಾಕರ್, ಟಿ.ಆರ್.ವಿಜಯ, ಮಹಿಳಾ ಮೋರ್ಚಾದ ಸುಜಾತ ಬಾಲಕೃಷ್ಣ, ಟಿ.ಕೆ.ರಮೇಶ್ ಇದ್ದರು.

error: Content is protected !!