ಅಸಮಾಧಾನಗೊಂಡ ಕಾಂಗ್ರೆಸ್ಸಿಗರ ಮನವೊಲಿಕೆ ಯತ್ನ : ನಂದಕುಮಾರ್ ಚರ್ಚೆ

13/01/2021

ಮಡಿಕೇರಿ ಜ.13 : ಜಿಲ್ಲಾ ಕಾಂಗ್ರೆಸ್ ಸಮಿತಿಯಲ್ಲಿನ ಇತ್ತೀಚಿನ ಬೆಳವಣಿಗೆಯಿಂದ ಬೇಸತ್ತು ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದ ವಿವಿಧ ಘಟಕಗಳ ಪ್ರಮುಖರನ್ನು ಭೇಟಿಯಾದ ಕೆಪಿಸಿಸಿ ಸಂಯೋಜಕ ಹಾಗೂ ನಗರಸಭೆಯ ಮಾಜಿ ಅಧ್ಯಕ್ಷ ಹೆಚ್.ಎಂ.ನಂದಕುಮಾರ್ ರಾಜೀನಾಮೆ ಹಿಂಪಡೆಯುವಂತೆ ಮನವೊಲಿಸಿದ್ದಾರೆ.
ನಾಪೋಕ್ಲು ಬ್ಲಾಕ್ ಕಿಸಾನ್ ಘಟಕದ ಪ್ರಧಾನ ಕಾರ್ಯದರ್ಶಿ, ಬೆಟ್ಟಗೇರಿ ವಲಯ ಯುವ ಕಾಂಗ್ರೆಸ್ ಅಧ್ಯಕ್ಷ ಹಾಗೂ ಕಾರುಗುಂದ ಬೂತ್ ಅಧ್ಯಕ್ಷ ಬೊಳ್ಳದಂಡ ಈ.ನಾಚಪ್ಪ, ಗ್ರಾ.ಪಂ ಮಾಜಿ ಸದಸ್ಯ ಸುಬ್ಬಯ್ಯ, ಕಾರ್ಯಕರ್ತರುಗಳಾದ ಅರುಣ್ ಕುಮಾರ್, ಲವಕುಮಾರ್, ರಮೇಶ್ ಮತ್ತಿತರರನ್ನು ನಂದಕುಮಾರ್ ಭೇಟಿಯಾಗಿ ಚರ್ಚಿಸಿದರು.
ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ ಮತ್ತಿತರರು ಹಾಜರಿದ್ದರು. ರಾಜೀನಾಮೆ ಪತ್ರ ಹಿಂಪಡೆಯುವುದಾಗಿ ಬೊಳ್ಳದಂಡ ಈ.ನಾಚಪ್ಪ ಹಾಗೂ ಇತರರು ಭರವಸೆ ನೀಡಿದರು.