ಕೊಡಗಿನ ಸಿಂಚನ ಅಭಿನಯದ ಅವಲಕ್ಕಿ ಪವಲಕ್ಕಿ’ ಚಲನಚಿತ್ರಕ್ಕೆ ಪ್ರಶಸ್ತಿಗಳ ಗರಿ

ಮಡಿಕೇರಿ ಜ.13 : ಕೊಡಗು ಜಿಲ್ಲೆಯ ಯುವನಟಿ ಸಿಂಚನಾ ನಟಿಸಿರುವ
ಅವಲಕ್ಕಿ ಪವಲಕ್ಕಿ’ ಚಲನಚಿತ್ರ 4 ಅಂತರರಾಷ್ಟ್ರೀಯ ಸಿನಿಮಾ ಪ್ರಶಸ್ತಿಗೆ ಭಾಜನವಾಗಿದೆ.
ಪ್ರಣವ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಅವಲಕ್ಕಿ ಪವಲಕ್ಕಿ ಇನ್ನಷ್ಟೇ ತೆರೆಗೆ ಬರಬೇಕಾಗಿದ್ದು, ಅಮೇರಿಕನ್ ಗೋಲ್ಡನ್ ಪಿಕ್ಚರ್ಸ್, ಉರುವಟ್ಟಿ ಇಂಟರ್ನ್ಯಾಷನಲ್ ಫಿಲ್ಮ್ ಫಸ್ಟಿವಲ್ ಪ್ರಶಸ್ತಿ, ಇಂಡೋ ಗ್ಲೋಬಲ್ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ ಪ್ರಶಸ್ತಿ ಮತ್ತು ನ್ಯೂಯಾರ್ಕ್ನ ಒನಿರೋಸ್ ಫಿಲ್ಮ್ ಅವಾರ್ಡ್ಗೆ ಭಾಜನವಾಗಿದೆ.
ಖ್ಯಾತ ನಿರ್ದೇಶಕ ಪ್ರೀತಂ ಶೆಟ್ಟಿ ನಿರ್ದೇಶನದಲ್ಲಿ ಸಿಂಚನಾ ನಟಿಸಿರುವ ಪಿಂಗಾರ' ತುಳು ಭಾಷೆಯ ಚಿತ್ರಕ್ಕೆ 2020 ರ ಚಲನಚಿತ್ರೋತ್ಸವದಲ್ಲಿ ಅಂತರಾಷ್ಟ್ರೀಯ ಪ್ರಶಸ್ತಿ ಲಭಿಸಿತ್ತು. ಪ್ರಸಕ್ತ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ
ಕಾವ್ಯಾಂಜಲಿ’ ಹೂಮಳೆ' ಧಾರಾವಾಹಿಯಲ್ಲಿ ನಟಿಸುತ್ತಿದ್ದು ಇದೀಗ ನೂತನ ಚಲನಚಿತ್ರ
ವಧನ’ ಚಿತ್ರದಲ್ಲಿ ನಾಯಕಿಯಾಗಿ ಸಿಂಚನಾ ನಟಿಸಲಿದ್ದಾರೆ.
ರಂಜಿತಾ ಸುಬ್ರಮಣ್ಯ ನಿರ್ಮಾಣ ಹಾಗೂ ದುರ್ಗಾಪ್ರಸಾದ್ ಅವರ ನಿರ್ದೇಶನದಲ್ಲಿ ಮೂಡಿಬಂದ `ಅವಲಕ್ಕಿ ಪವಲಕ್ಕಿ’ ತಾರಾಗಣದಲ್ಲಿ ಕುಶಾಲನಗರದ ಸಿಂಚನಾ ಪೊನ್ನವ್ವ, ದೀಪಕ್ ಪಟೇಲ್, ಸಮರ್ಥ್ ಭಾರದ್ವಾಜ್, ಶ್ರೇಯ ಹಾಗೂ ಹನುಮಂತು ನಟಿಸಿದ್ದಾರೆ. ಚಿತ್ರಕಥೆ ವಿನೂತನವಾಗಿದ್ದು ಕಾಡುಜನರ ದೈವ ಭಕ್ತಿಯನ್ನು ಶೋಷಣೆ ಮಾಡುವ ಕಥೆ ಹೊಂದಿರುವ ಅವಲಕ್ಕಿ ಪವಲಕ್ಕಿ ಸಧ್ಯದಲ್ಲಿಯೇ ತೆರೆಗೆ ಬರಲಿದೆ ಎಂದು ನಿರ್ಮಾಪಕರಾದ ರಂಜಿತಾ ಸುಬ್ರಮಣ್ಯ ಮಾಹಿತಿ ನೀಡಿದ್ದಾರೆ.