ನಾಟಕ ರಚನಾ ಶಿಬಿರಕ್ಕೆ ಅರ್ಜಿ ಆಹ್ವಾನ

January 14, 2021

ಮಡಿಕೇರಿ ಜ.13 : ಕರ್ನಾಟಕ ನಾಟಕ ಅಕಾಡೆಮಿ ವತಿಯಿಂದ ನಾಟಕ ರಚನಾ ಶಿಬಿರ ಏರ್ಪಡಿಸಿದ್ದು, ಅರ್ಜಿ ಆಹ್ವಾನಿಸಲಾಗಿದೆ. 18 ರಿಂದ 35 ವರ್ಷಗಳ ವಯೋಮಿತಿಯುಳ್ಳ ಯುವಕ\ಯುವತಿಯರು, ನಾಟಕ ರಚನೆಯಲ್ಲಿ ಆಸಕ್ತಿ ಇರುವವರು ತಮ್ಮ ಸ್ವವಿವರಗಳೊಂದಿಗೆ (ವಯಸ್ಸಿನ ದೃಢೀಕರಣ ಲಗತ್ತಿಸಬೇಕು). ಅರ್ಜಿ ಸಲ್ಲಿಸಲು ಜನವರಿ, 18 ಕೊನೆಯ ದಿನವಾಗಿದೆ. ನಿಗದಿಪಡಿಸಿರುವ ದಿನಾಂಕದೊಳಗೆ ರಿಜಿಸ್ಟ್ರಾರ್ ಕರ್ನಾಟಕ ನಾಟಕ ಅಕಾಡೆಮಿ, ಚಾಲುಕ್ಯ ವಿಭಾಗ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002 ಈ ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅವರು ತಿಳಿಸಿದ್ದಾರೆ.

error: Content is protected !!