ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಕುರಿತು ವಿವಿಧ ಸ್ಪರ್ಧೆಗಳು

January 14, 2021

ಮಡಿಕೇರಿ ಜ.13 :ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಹುಟ್ಟು ಹಬ್ಬದ ಪ್ರಯುಕ್ತ ವಿವಿಧ ವಿಭಾಗಗಳಲ್ಲಿ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿದೆ.
13 ವರ್ಷದಿಂದ 18 ವರ್ಷದವರೆಗಿನ ವಿದ್ಯಾರ್ಥಿಗಳಿಗೆ “ಶಿಸ್ತು ಪಾಲನೆಯಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ” ವಿಚಾರದ ಬಗ್ಗೆ. 19 ವರ್ಷದಿಂದ 25 ವರ್ಷದವರೆಗಿನ ವಿದ್ಯಾರ್ಥಿಗಳಿಗೆ “ಸಾಧನೆಯ ಹಾದಿಯಲ್ಲಿ ಇತ್ತು ಸತತ ಶ್ರಮ (ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಬಾಳ ಹಾದಿಯನ್ನಾಧರಿಸಿ)” ಎಂಬ ವಿಚಾರದ ಕುರಿತು ಹಾಗೂ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜೀವನ ಮೌಲ್ಯಗಳು ಎಂಬ ವಿಚಾರದ ಬಗ್ಗೆ ಸಾರ್ವಜನಿಕರಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ. ಪ್ರತೀ ವಿಭಾಗದಲ್ಲಿಯೂ ಮೂರು ಬಹುಮಾನ ನೀಡಲಾಗುತ್ತದೆ.
ಪ್ರಬಂಧಗಳನ್ನು ಇದೇ ಜನವರಿ, 20 ರೊಳಗೆ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕøತಿ ಇಲಾಖೆ, (ಪ್ರಬಂಧ ಸ್ಪರ್ಧೆ ವಿಭಾಗ) ಎರಡನೇ ಮಹಡಿ, ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ಮಡಿಕೇರಿ-571201 ಕೊಡಗು ಜಿಲ್ಲೆ ಈ ವಿಳಾಸಕ್ಕೆ ಕಳುಹಿಸಬೇಕು. ಇ-ಮೇಲ್ ಛಿಚಿಡಿiಚಿಠಿಠಿಚಿ2021@gmಚಿiಟ.ಛಿom ಇಲ್ಲಿಗೆ ಮಿಂಚಂಚೆಯಲ್ಲಿ ಕೂಡ ಪ್ರಬಂಧಗಳನ್ನು ಕಳುಹಿಸಬಹುದಾಗಿದ್ದು, ಪ್ರಬಂಧದೊಂದಿಗೆ ಸ್ಪರ್ಧಿಗಳು ತಮ್ಮ ಪೋಟೋ, ವಯಸ್ಸಿನ ದೃಢಿಕರಣ, ಪೂರ್ಣ ವಿಳಾಸವನ್ನು ದೂರವಾಣಿ ಸಂಖ್ಯೆಯೊಂದಿಗೆ ನೀಡಿರಬೇಕು. ಪ್ರಬಂಧವು ಒಂದು ಸಾವಿರ ಪದಗಳಿಗೆ ಮೀರದಂತೆ ಇರಲಿ.
ವಿಡಿಯೋ ಮೂಲಕ ಭಾಷಣ ಸ್ಪರ್ಧೆ:-ಕೊಡಗು ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕುರಿತಾಗಿ “ಯುದ್ಧ ಭೂಮಿಯಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ” ವಿಚಾರದ ಬಗ್ಗೆ ವಿಡಿಯೋ ಮೂಲಕ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಆಯೋಜಿಸಿರುವ ಭಾಷಣ ಸ್ಪರ್ಧೆಗೆ ಕಳುಹಿಸಬಹುದು.
5 ನಿಮಿಷಕ್ಕೆ ಮೀರಿರದಂತೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕುರಿತಂತೆ ಗುಣಮಟ್ಟದ ವಿಡಿಯೋವನ್ನು ಮಾಡಿ ಜನವರಿ 20 ರೊಳಗೆ ಕಳುಹಿಸಬೇಕು. ಸ್ಪರ್ಧೆಗೆ ಕಳುಹಿಸಿದ ವಿಡಿಯೋದ ಕೊನೆಯಲ್ಲಿ ಸ್ಫರ್ಧಾ ವಿದ್ಯಾರ್ಥಿ ತನ್ನ ಹೆಸರು, ದೂರವಾಣಿ ಸಂಖ್ಯೆ ಹೇಳಿರಬೇಕು. ಈ ವಿಡಿಯೋ ಕಳುಹಿಸಲು ನೀಡಲಾಗಿರುವ ಮೊಬೈಲ್‍ಗೆ ಬೇರೆ ಯಾವುದೇ ಸಂದೇಶ, ಮಾಹಿತಿ ಕಳುಹಿಸುವಂತಿಲ್ಲ. ವಿಜೇತ ವಿದ್ಯಾರ್ಥಿಗಳಿಗೆ ಮೂರು ಬಹುಮಾನ ನೀಡಲಾಗುತ್ತದೆ. ಸ್ಪರ್ಧೆಗಳಲ್ಲಿ ಪಾಲ್ಗೊಂಡ ಎಲ್ಲಾ ಸ್ಪರ್ಧಿಗಳಿಗೂ ಪ್ರಶಂಸನಾ ಪತ್ರ ನೀಡಲಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಪ್ರಕಟಣೆ ತಿಳಿಸಿದೆ.

error: Content is protected !!