ಹಂದಿ ಘಟಕಕ್ಕೆ ಸಹಾಯ ಧನ

January 14, 2021

ಮಡಿಕೇರಿ ಜ.14 : -2019-20ನೇ ಸಾಲಿನ ಕೇಂದ್ರ ಪುರಸ್ಕøತ ರಾಷ್ಟ್ರೀಯ ಜಾನುವಾರು ಮಿಷನ್ (ಎನ್‍ಎಲ್‍ಎಂ) ಯೋಜನೆಯಡಿ ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಗ್ರಾಮೀಣ ಹಿತ್ತಲ ಹಂದಿ ಅಭಿವೃದ್ಧಿ ಯೋಜನೆಯಡಿ ಹಂದಿ ಘಟಕ ಅನುಷ್ಠಾನಗೊಳಿಸಲು (3 ಹೆಣ್ಣು + 1 ಗಂಡು) ಮಡಿಕೇರಿ ತಾಲ್ಲೂಕಿಗೆ 65, ಸೋಮವಾರಪೇಟೆ ತಾಲ್ಲೂಕಿಗೆ 65, ವಿರಾಜಪೇಟೆ ತಾಲ್ಲೂಕಿಗೆ 70 ಗುರಿ ನಿಗಧಿಪಡಿಸಲಾಗಿದ್ದು, ಘಟಕದ ವೆಚ್ಚ ರೂ.21 ಸಾವಿರ ಸಹಾಯಧನ 18,900 ಫಲಾನುಭವಿಯ ಪಾಲು ರೂ.2,100 ಆಗಿದೆ.
ಜಾನುವಾರುಗಳ ವಿಮಾ ಯೋಜನೆಗೆ ಸಂಬಂಧಿಸಿದಂತೆ ಸಾಮಾನ್ಯ ವರ್ಗದ ಫಲಾನುಭವಿಗಳ ಜಾನುವಾರುಗಳಿಗೆ ಒಂದು, ಮೂರು ವರ್ಷದ ಅವಧಿಗೆ ಮಾರುಕಟ್ಟೆ ಮೌಲ್ಯದ ಶೇ.2, ಶೇ.6 ಪ್ರೀಮಿಯಂ ದರದಲ್ಲಿ ಗರಿಷ್ಠ ರೂ.70 ಸಾವಿರ ಮೂಲ ಬೆಲೆಯವರೆಗೆ ಪ್ರೀಮಿಯಂ ಸಹಾಯಧನ ದರದಂತೆ ಜಾನುವಾರುಗಳಿಗೆ ವಿಮಾ ಸೌಲಭ್ಯ ಒದಗಿಸಲಾಗುವುದು. ಆಸಕ್ತ ಫಲಾನುಭವಿಗಳು ಈ ಯೋಜನೆಗಳ ಪ್ರಯೋಜನ ಪಡೆದುಕೊಳ್ಳುವಂತೆ ಕೋರಿದೆ.
ಹೆಚ್ಚಿನ ಮಾಹಿತಿಗೆ ಹತ್ತಿರದ ಪಶು ವೈದ್ಯಾಧಿಕಾರಿ ಅವರನ್ನು ಸಂಪರ್ಕಿಸಬಹುದು ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕರಾದ ಡಾ.ಪಿ.ಸುರೇಶ್ ಭಟ್ ಅವರು ತಿಳಿಸಿದ್ದಾರೆ.

error: Content is protected !!