ಜೇಸಿಸ್ ವಲಯ-14ರ ನಿರ್ದೇಶಕರಾಗಿ ಪತ್ರಕರ್ತ ರಫೀಕ್ ತೂಚಮಕೇರಿ ನೇಮಕ

14/01/2021

ಪೊನ್ನಂಪೇಟೆ, ಜ.14: ಯುವನಾಯಕರ ಮತ್ತು ಉದ್ಯಮಶೀಲರ ವಿಶ್ವವ್ಯಾಪ್ತಿ ಒಕ್ಕೂಟದ(ಜೂನಿಯರ್ ಚೇಂಬರ್ ಇಂಟರ್ನ್ಯಾಷನಲ್) ಭಾಗವಾಗಿರುವ ಭಾರತೀಯ ಜೇಸಿಸ್ ನ ವಲಯ-14ರ ವಲಯಾಡಳಿತ ಮಂಡಳಿಗೆ ನಿರ್ದೇಶಕರಾಗಿ ಪತ್ರಕರ್ತ ರಫೀಕ್ ತೂಚಮಕೇರಿ ನೇಮಕಗೊಂಡಿದ್ದಾರೆ.

ಈ ಕುರಿತು ನೇಮಕಾತಿ ಆದೇಶ ಹೊರಡಿಸಿರುವ ಜೇಸಿಸ್ ವಲಯ-14ರ ವಲಯಾಧ್ಯಕ್ಷ ಭರತ್ ಆಚಾರ್ಯ ಅವರು, ರಫೀಕ್ ಅವರಿಗೆ ‘ಅಭಿವೃದ್ಧಿ ಮತ್ತು ಬೆಳವಣಿಗೆ’ ವಿಭಾಗದ ಹೊಣೆಗಾರಿಕೆಯನ್ನು ವಹಿಸಿದ್ದಾರೆ. ಮುಂದಿನ ಫೆಬ್ರವರಿ ತಿಂಗಳಲ್ಲಿ ನಡೆಯುವ ವಲಯಾಧಿಕಾರಿಗಳ ತರಬೇತಿ ಕಾರ್ಯಾಗಾರದಲ್ಲಿ ಇವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಕಳೆದ 18 ವರ್ಷಗಳಿಂದ ಜೇಸಿಸ್ ಆಂದೋಲನದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ರಫೀಕ್ ಅವರು, ‘ಜೆ.ಸಿ.ಐ. ಪೊನ್ನಂಪೇಟೆ ನಿಸರ್ಗ’ ಘಟಕದ ಸಂಸ್ಥಾಪಕ ಅಧ್ಯಕ್ಷರಾಗಿದ್ದಾರೆ.