ಸುಂಟಿಕೊಪ್ಪ ಸಮೀಪದ ಬಾಳೆಕಾಡು ಕೆರೆಗೆ ಕಾರು ಪಲ್ಟಿ : ತಾಯಿ, ಮಗಳು ದುರ್ಮರಣ

15/01/2021

ಮಡಿಕೇರಿ ಜ. 15 : ನಿಯಂತ್ರಣ ತಪ್ಪಿ ಕಾರು ಮಗುಜಿ ಕೆರೆಗೆ ಬಿದ್ದ ಪರಿಣಾಮ ತಾಯಿ ಮತ್ತು ಮಗಳು ಕಾರಿನಲ್ಲಿ ಸಿಲುಕಿ ಮರಣ ಹೊಂದಿರುವ ಘಟನೆ ಸೋಮವಾರಪೇಟೆ ತಾಲ್ಲೂಕಿನ ಸುಂಟಿಕೊಪ್ಪ ಸಮೀಪದ ಬಾಳೆಕಾಡಿನಲ್ಲಿ ನಡೆದಿದೆ.
ಮಡಿಕೇರಿ ಅರಣ್ಯ ಇಲಾಖೆ ಪ್ರಥಮ ದರ್ಜೆ ಸಹಾಯಕ ವೆಂಕಟೇಶ್, ಬಬಿತಾ ಮತ್ತು ಮಗಳು ಪಲ್ಲವಿ ಕಾರಿನಲ್ಲಿ ಸುಂಟಿಕೊಪ್ಪದಿಂದ ಮಡಿಕೇರಿಗೆ ಬರುವ ವೇಳೆ ಅವಘಡ ಸಂಭವಿಸಿದೆ. ಘಟನೆ ಬಳಿಕ ವೆಂಕಟೇಶ್ ಈಜುತ್ತ ದಡ ಸೇರಿದ್ದು, ಪತ್ನಿ ಮತ್ತು ಮಗಳು ಕಾರಿನಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ. ಸುಂಟಿಕೊಪ್ಪ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕ್ರೇನ್ ಬಳಸಿ ಕೆರೆಯಿಂದ ಕಾರನ್ನು ಮೇಲೆತ್ತಲಾಗಿದೆ.