ಅಮ್ಮತ್ತಿಯಲ್ಲಿ ಜ. 24 ರಂದು ಕೊಡಗು ಜಿಲ್ಲಾ ಮಹಿಳಾ ಫುಟ್ಬಾಲ್ ತಂಡಕ್ಕೆ ಆಯ್ಕೆ ಪ್ರಕ್ರಿಯೆ

15/01/2021

ಮಡಿಕೇರಿ ಜ. 15 : ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆಯ ವತಿಯಿಂದ ಜ. 24 ರಂದು ಮಹಿಳಾ ಫುಟ್ಬಾಲ್ ತಂಡದ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಅಮ್ಮತ್ತಿಯ ಪ್ರೌಢ ಶಾಲಾ ಮೈದಾನದಲ್ಲಿ ಬೆಳಗ್ಗೆ 10.30 ಗಂಟೆಗೆ ನಡೆಯುವ ಆಯ್ಕೆ ಪ್ರಕ್ರಿಯೆಯಲ್ಲಿ ಆಸಕ್ತ ಮಹಿಳಾ ಕ್ರೀಡಾಪಟುಗಳು ಭಾಗವಹಿಸಲು ಕೊಡಗು ಫುಟ್ಬಾಲ್ ಸಂಸ್ಥೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಯಾವುದೇ ವಯೋಮಾನದ ಅಭ್ಯಂತರವಿಲ್ಲ.
ಭಾಗವಹಿಸುವ ಕ್ರೀಡಾಪಟುಗಳು,ಕ್ರೀಡಾ ಉಡುಪುಗಳನ್ನು ಅವರೇ ತರತಕ್ಕದ್ದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ ನಾಗೇಶ್ ಪಿ.ಎ 9535531244, ದೇಚಮ್ಮ 9482668839,ಇಬ್ರಾಹಿಂ 8618303623 ಸಂಪರ್ಕಿಸಲು ಕೋರಿದ್ದಾರೆ.