ಮಕ್ಕಳ ಹಕ್ಕುಗಳ ತರಬೇತಿ ಕಾರ್ಯಾಗಾರ ಮುಂದೂಡಿಕೆ

January 15, 2021

ಮಡಿಕೇರಿ ಜ.15 : ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಬೆಂಗಳೂರು ಇವರ ಸಹಭಾಗಿತ್ವದಲ್ಲಿ ಬಾಲನ್ಯಾಯ ಕಾಯ್ದೆಯಡಿ ನೋಂದಣೀಯಾಗಿರುವ ಸರ್ಕಾರಿ ಸರ್ಕಾರೇತರ ಮಕ್ಕಳ ಪಾಲನಾ ಸಂಸ್ಧೆಗಳ ಮುಖ್ಯಸ್ಥರು, ಸಿಬ್ಬಂದಿಗಳಿಗೆ ಹಾಗೂ ಮಕ್ಕಳ ಸಹಾಯವಾಣೀ (ಕೊಡಗು ಗ್ರಾಮೀಣಭಿವೃದ್ಥಿ ಸಂಸ್ಧೆ) ಕುಶಾಲನಗರ ಸಂಸ್ಥೆಯ ಸಂಯೋಜಕರು, ಸಿಬ್ಬಂದಿಗಳಿಗೆ ಮಕ್ಕಳ ಹಕ್ಕುಗಳು ಬಾಲ್ಯನ್ಯಾಯ ಕಾಯ್ದೆ 2015 ಲೈಂಗಿಕ ದೌರ್ಜನ್ಯಗಳಿಂದ ಮಕ್ಕಳ ರಕ್ಷಣಾ ಕಾಯ್ದೆ 2012 (ಪೋಕ್ಸೋ), ಬಾಲ್ಯಾವಸ್ಧೆಯ ಮತ್ತು ಕಿಶೋರಾವಸ್ಥೆಯ ಕಾರ್ಮಿಕರ ನಿಷೇಧ ಮತ್ತು ನಿಯಂತ್ರಣ ಕಾಯ್ದೆ 1986 ಹಾಗೂ ತಿದ್ದುಪಡಿ 2016, ಬಾಲ್ಯವಿವಾಹ ನಿಷೇಧ ಕಾಯ್ದೆ-2006, ಮಕ್ಕಳ ಸಹಾಯವಾಣಿ ಸಂಸ್ಥೆ ಉದ್ದೇಶ, ಕಾರ್ಯಗಳು ಹಾಗೂ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಮಕ್ಕಳಿಗೆ ನೀಡಬೇಕಾದ ಮೂಲಭೂತ ಸೌಕರ್ಯಗಳ ಬಗ್ಗೆ ಜನವರಿ, 16 ರಂದು ನಡೆಯಬೇಕಿದ್ದ ತರಬೇತಿ ಕಾರ್ಯಗಾರವನ್ನು ಮುಂದೂಡಲಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅವರು ತಿಳಿಸಿದ್ದಾರೆ.

error: Content is protected !!