ಗಣರಾಜ್ಯೋತ್ಸವ ಪರೇಡ್ ಗೆ ನೂರೆರಾ ಮೋಹಿತ ಆಯ್ಕೆ

January 15, 2021

ಮಡಿಕೇರಿ ಜ.15 : ಇದೇ ಜನವರಿ 26 ರಂದು ನವದೆಹಲಿಯಲ್ಲಿ ಗಣರಾಜ್ಯೋತ್ಸವ ದಿನದ ಅಂಗವಾಗಿ ನಡೆಯುವ ರಾಷ್ಟ್ರೀಯ ಸೇವಾ ಯೋಜನೆ ಪರೇಡ್ ನಲ್ಲಿ ಕೊಡಗು ಮೂಲದ ಕುಮಾರಿ ನೂರೆರಾ ಮೋಹಿತ (ಪಾಯಲ್) ಮಹಾರಾಷ್ಟ್ರ ರಾಜ್ಯವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.
ಮೋಹಿತ ಅವರು ಕೊಡಗಿನ ಹುದಿಕೇರಿಯ, ಪ್ರಸ್ತುತ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ, ನೂರೆರ ರಮೇಶ್ (ಮನು) ಹಾಗೂ ಹೇಮಾವತಿ (ಸಬಿತ, ತವರುಮನೆ ಕೊಟ್ಟಿಯಂಡ, ಮಗ್ಗುಲ) ಅವರುಗಳ ಪುತ್ರಿಯಾಗಿದ್ದಾರೆÉ.
ಪ್ರಸ್ತುತ ಮಹಾರಾಷ್ಟ್ರದ ಪುಣೆಯಲ್ಲಿ ನೆಲೆಸಿರುವ ಮೋಹಿತ ಈಗ ನವದೆಹಲಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಹತ್ತನೇ ತರಗತಿ ಹಾಗೂ 12 ನೇ ತರಗತಿ ವ್ಯಾಸಂಗವನ್ನು ಆರ್ಮಿ ಪಬ್ಲಿಕ್ ಸ್ಕೂಲ್, ಡೆಲ್ಲಿ ಕ್ಯಾಂಟ್ –10 ರಲ್ಲಿ ಮುಗಿಸಿದ್ದಾರೆ.
ನಂತರ, ಪುಣೆಯ ಭಾರತಿ ವಿದ್ಯಾಪೀಟ್ “ಡೀಮ್ಡ್ ಟು ಬಿ ಯೂನಿವರ್ಸಿಟಿ” ಗೆ ಸೇರಿದ “ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಅಂಡ್ ಎಂಟ್ರಿಪ್ರೆನೆರ್ಷಿಪ್ ಡೆವಲಪ್ಮೆಂಟ್” ನಲ್ಲಿ ವ್ಯಾಸಂಗ ಮುಂದುವರೆಸಿದ್ದಾರೆ.

error: Content is protected !!