ಚೆಟ್ಟಳ್ಳಿಯಲ್ಲಿ ಪುಣ್ಯಕೋಟಿ ವಾಣಿಜ್ಯ ಸಂಕೀರ್ಣ ಹಾಗೂ ಅತಿಥಿಗೃಹ ಉದ್ಘಾಟನೆ

January 15, 2021

ಮಡಿಕೇರಿ ಜ. 15 : ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ 75 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ `ಪುಣ್ಯಕೋಟಿ’ ವಾಣಿಜ್ಯ ಸಂಕೀರ್ಣ ಹಾಗೂ ಅತಿಥಿ ಗೃಹವನ್ನು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಉದ್ಘಾಟಿಸಿದರು.
ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಶಕ್ತಿ ದಿನ ಪತ್ರಿಕೆಯ ಪ್ರಧಾನ ಸಂಪಾದಕ ಜಿ.ರಾಜೇಂದ್ರ ಅವರು ಪಶುಪತಿನಾಥ, ನಂದಿ, ಶ್ರೀಕೃಷ್ಣ, ಪುಣ್ಯಕೋಟಿ ಮೂರ್ತಿಗಳನ್ನು ಲೋಕಾರ್ಪಣೆ ಮಾಡಿದರು.

ಹಿರಿಯ ಸಹಕಾರಿಗಳಿಗೆ, ದಾನಿಗಳಿಗೆ ಸನ್ಮಾನ: ಅತಿಥಿಗಳಾದ ಜಿ. ರಾಜೇಂದ್ರ, ರಘು ಜಿ. ಸಕಲೇಶ್‍ಪುರ, ಪಿ. ಕೃಷ್ಣಮೂರ್ತಿ, ಪುರುಷೋತ್ತಮ, ಚೇರತಮ್ಮಂಡ ಮುದ್ದಮಯ್ಯ, ಎಂ.ಎಸ್ ಮಹೇಂದ್ರ, ಶ್ರೀನಿವಾಸ್ ಎಸ್.ಜಿ, ಯೋಗೇಶ್‍ಭಟ್ ಹಾಗೂ 75 ವಯಸ್ಸಿನ ಮೇಲ್ಪಟ್ಟ ಹಿರಿಯ ಸಹಕಾರಿಗಳಿಗೆ ಕಟ್ಟಡ ನಿರ್ಮಾಣಕ್ಕೆ ಧನ ಸಹಾಯನೀಡಿದ ಸಹಕಾರಿಗಳಿಗೆ ಕಟ್ಟಡ ನಿರ್ಮಾಣಮಾಡಿದವರಿಗೆ, ಆಂತರಿಕ ಲೆಕ್ಕಪರಿಶೋಧಕ ರಮೇಶ್, ಸಂಘದ ಅಧ್ಯಕ್ಷ ಮಣಿಉತ್ತಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಜಿ.ಪಂ ನೂತನ ಸದಸ್ಯರಿಗೆ ಸನ್ಮಾನ : ಸ್ಥಳೀಯ ಬಿಜೆಪಿ ಸ್ಥಾಯಿಸಮಿತಿಯ ಪ್ರಮುಖ್ ಬಲ್ಲಾರಂಡ ಕಂಠಿಕಾರ್ಯಪ್ಪ ಪದಾದಿಕಾರಿಗಳು ಹಾಗೂ ಸದಸ್ಯರು ಬಲ್ಲಾರಂಡ ಮಣಿಉತ್ತಪ್ಪನಿಗೆ ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಉಪಾಧ್ಯಕ್ಷ ಕೇಟೋಳಿರ ಎಸ್. ಹರೀಶ್ ಪೂವಯ್ಯ, ವಕೀಲ ಪಿ.ಕೃಷ್ಣಮೂರ್ತಿ, ಮಡಿಕೇರಿ ಗಣೇಶ್ ಮಡಿಕಲ್ಸ್‍ನ ಮಾಲೀಕ ಪುರುಷೋತ್ತಮ, ಕಾಫಿಬೆಳೆಗಾರರು ಹಾಗೂ ಉದ್ಯಮಿ ಚೇರಳತಮ್ಮಂಡ ಎ.ಮುದ್ದಮಯ್ಯ, ಕಾಫಿಬೆಳೆಗಾರ ಎಂ.ಎಸ್ ಮಹೇಂದ್ರ, ಸುಂಠಿಕೊಪ್ಪ ವಿಜಪ್ಲಾಂಟೆಷನ್ ಮಾಲೀಕ ಶ್ರೀನಿವಾಸ್, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ನಿರ್ದೇಕರಾದ ಉಷಾತೇಜಸ್ವಿ, ಚೆಟ್ಟಳ್ಳಿ ಚೇರಳ ಗೌಡಸಂಘದ ಅಧ್ಯಕ್ಷ ಅಯ್ಯಂಡ್ರ ಎಸ್.ರಾಘವಯ್ಯ, ಚೆಟ್ಟಳ್ಳಿ ಕೊಡವ ಸಮಾಜದ ಅಧ್ಯಕ್ಷ ಮುಳ್ಳಂಡ ರತ್ತುಚಂಗಪ್ಪ, ಮಾಜಿ ಅಧ್ಯಕ್ಷರುಗಳಾದ ಬಿದ್ದಂಡ ಎ ಅಚ್ಚಯ್ಯ, ಕೊಂಗೇಟಿರ ಎಂ ಅಪ್ಪಣ್ಣ , ಮಾಜಿ ನಿರ್ದೆಶಕರಾದ ಸೋಮಯಂಡ ದಿಲೀಪ್ ಅಪ್ಪಚ್ಚು, ಕಾಫಿಬೆಳೆಗಾರರಾದ ಕೊಂಗೇಟಿರ ಕುಸುಮ್ ಪೊನ್ನಪ್ಪ ಹಾಜರಿದ್ದರು.

error: Content is protected !!