ಮಡಿಕೇರಿಯಲ್ಲಿ ಶ್ರೀ ರಾಮಮಂದಿರ ನಿಧಿ ಸಮರ್ಪಣಾ ಅಭಿಯಾನಕ್ಕೆ ಚಾಲನೆ

15/01/2021

ಮಡಿಕೇರಿ ಜ. 15 : ನಗರದ ಶ್ರೀ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ದೇವಾಲಯದಲ್ಲಿ ಅಭಿಮನ್ಯು ವಸತಿ ವತಿಯಿಂದ ವಿಶೇಷ ಪೂಜೆ, ಪ್ರಾಥ೯ನೆ ಸಲ್ಲಿಸುವ ಮೂಲಕ ಅಯೋಧ್ಯೆಯಲ್ಲಿನ ಶ್ರೀ ರಾಮಮಂದಿರ ನಿಮಾ೯ಣ ಕಾಯ೯ಕ್ಕೆ ನಿಧಿ ಸಮಪ೯ಣಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ, ಪ್ರಮುಖರಾದ ಬಿ.ಕೆ. ಅರುಣ್ ಕುಮಾರ್,ಜೀವನ್ , ಅನಿತಾಪೂವಯ್ಯ, ಚಂದ್ರಶೇಖರ್, ಆರ್.ಬಿ.ರವಿ, ನವೀನ್ ಪೂಜಾರಿ, ಶಿವಕುಮಾರ್, ಭಾರತಿ ರಮೇಶ್ , ಪ್ರೇಮಾ, ಶ್ವೇತಾ, ಮಿನಾ ಕುಮಾರಿ, ರುಕ್ಮಿಣಿ, ಭವಾನಿ ಸೇರಿದಂತೆ ಇತರ ಮುಖಂಡರು ಪಾಲ್ಗೊಂಡಿದ್ದರು.

ಜಿಲ್ಲೆಯ ಎಲ್ಲಾ ತಾಲೂಕಿನ, ಎಲ್ಲಾ ಗ್ರಾ.ಪಂ ವ್ಯಾಪ್ತಿಯ 294 ಗ್ರಾಮದಲ್ಲಿಯೂ ನಿಧಿ ಸಂಗ್ರಹ ಅಭಿಯಾನ ಆರಂಭಗೊಂಡಿದ್ದು, ಕೊಡಗು ಜಿಲ್ಲೆಯಲ್ಲಿ ಜ.25 ವರೆಗೆ ನಡೆಯಲಿದೆ.
ಇದಕ್ಕಾಗಿ ಜಿಲ್ಲಾ ಸಮಿತಿ, ತಾಲ್ಲೂಕು ಸಮಿತಿ, ಗ್ರಾ.ಪಂ ಮತ್ತು ಗ್ರಾಮ ಸಮಿತಿಗಳನ್ನು ಮಾಡಲಾಗಿದ್ದು, ಅಭಿಯಾನ ಆರಂಭಗೊಂಡಿದೆ.

ಸಂಘ ಪರಿವಾರದ ಎಲ್ಲಾ ಸಂಘಟನೆಗಳು ಅಭಿಯಾನದಲ್ಲಿ ಪಾಲ್ಗೊಳ್ಳಲಿದೆ. ಜಿಲ್ಲಾ ಸಂಯೋಜಕರಾಗಿ ವಿಹಿಂಪನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ನರಸಿಂಹ, ಸಹ ಸಂಯೋಜಕರಾಗಿ ಕುಟ್ಟಂಡ ಮಿರನ್ ಕಾವೇರಪ್ಪ, ನಾಪಂಡ ರವಿ ಕಾಳಪ್ಪ, ಬಿ.ಬಿ.ಮಹೇಶ್, ಚೇತನ್, ರೀನಾ ಪ್ರಕಾಶ್ ಇದ್ದಾರೆ. ಅಭಿಯಾನವನ್ನು ಯಶಸ್ವಿಯಾಗಿ ನಡೆಸಲು ಇದೇ ರೀತಿಯಲ್ಲಿ ತಾಲೂಕು ಸಮಿತಿ, ಗ್ರಾ.ಪಂ ಸಮಿತಿ, ಗ್ರಾಮ ಸಮಿಗಳು ಕಾರ್ಯ ನಿರ್ವಹಿಸಲಿದೆ.