ಕೊಂಡಂಗೇರಿಯಲ್ಲಿ ರಾಷ್ಟ್ರೀಯ ಯುವ ದಿನಾಚರಣೆ : ರಕ್ತದಾನ ಶಿಬಿರ
January 15, 2021

ಮಡಿಕೇರಿ ಜ.15 : ಕೊಡಗು ನೆಹರು ಯುವ ಕೇಂದ್ರ, ಮಡಿಕೇರಿ ರೆಡ್ ಕ್ರಾಸ್ ಸಂಸ್ಥೆ ಮತ್ತು ಕೊಂಡಂಗೇರಿ ಯೂತ್ ಕ್ಲಬ್ ನ ಸಂಯುಕ್ತಾಶ್ರಯದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ಕೊಂಡಂಗೇರಿಯಲ್ಲಿ ರಾಷ್ಟ್ರೀಯ ಯುವ ದಿನಾಚರಣೆ ಹಾಗೂ ರಕ್ತದಾನ ಶಿಬಿರ ನಡೆಯಿತು.
ಯೂತ್ ಕ್ಲಬ್ ಅಧ್ಯಕ್ಷ ನಾಸಿರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಒಂಟಿಯಂಗಡಿಯ ವೈದ್ಯಾಧಿಕಾರಿ ಡಾ.ಹೇಮಲತಾ ಉದ್ಘಾಟಿಸಿದರು. ಪ್ರಮುಖರಾದ ಖಲೀಲ್ ಮಡಿಕೇರಿ, ಸೆಲ್ವಿನ್, ಯೂಸುಫ್, ಜಿನಾಸ್, ಮಹೇಂದ್ರ, ರವಿಕುಮಾರ್, ಸಂತೋಷ್, ನಿಯಾಸ್, ನಿಶಾದ್, ಉರೈಸ್, ರಮೀಝ್, ಶಫೀಕ್, ಅನೀಸ್, ಸುಹೈಲ್ ಉಪಸ್ಥಿತರಿದ್ದರು. ಶಾಹಿದ್ ವಂದಿಸಿದರು.