ಶ್ರೀ ರಾಮಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನಕ್ಕೆ ಸುಂಟಿಕೊಪ್ಪದಲ್ಲಿ ಚಾಲನೆ

16/01/2021

ಸುಂಟಿಕೊಪ್ಪ,ಜ.16: ಅಯೋಧ್ಯೆಯಲ್ಲಿ ಶ್ರೀರಾಮ ಜನ್ಮ ಭೂಮಿಯಲ್ಲಿ ರಾಮ ಮಂದಿರ ನಿರ್ಮಾಣ ಮತ್ತು ತೀರ್ಥಕ್ಷೇತ್ರ ನಿಧಿ ಅಭಿಯಾನಕ್ಕೆ ಸುಂಟಿಕೊಪ್ಪ ಶ್ರೀರಾಮ ಮಂದಿರದಲ್ಲಿ ಚಾಲನೆ ನೀಡಲಾಯಿತು.
ಪಟ್ಟಣದ ಕೋದಂಡ ರಾಮಚಂದ್ರ ದೇವಾಲಯದಲ್ಲಿ ಶುಕ್ರವಾರವ ವಿಶೇಷ ಪೂಜೆ ಸಲ್ಲಿಸಿ ನಿಧಿ ಸಮರ್ಪಣಾ ಅಭಿಯಾನಕ್ಕೆ ವಿಶ್ವಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ಹಾಗೂ ಅಭಿಯಾನದ ಜಿಲ್ಲಾ ಸಂಚಾಲಕರಾದ ಡಿ.ನರಸಿಂಹ ಚಾಲನೆ ನೀಡಿ ನಂತರ ಮಾತನಾಡಿದ ಅವರು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಲು ಜನರಿಂದಲೇ ನಿಧಿ ಸಂಗ್ರಹಿಸುವುದು ಈ ಅಭಿಯಾನದ ಉದ್ದೇಶವಾಗಿದೆ. ಅಯೋದ್ಯೆಯಲ್ಲಿ ಬಾಬರಿ ಮಸೀದಿಯನ್ನು ಕೆಡವಿ 28 ವರ್ಷಗಳು ಕಳೆದಿದ್ದು ಈ ಸಂಗ್ರಾಮದಲ್ಲಿ ಅನೇಕ ಹಿಂದು ಭಾಂದವರು ಮಹನೀಯರು ಬಲಿದಾನ ಗೈದಿದ್ದಾರೆ. 400 ವರ್µಗಳ ಹೋರಾಟದ ಫಲವಾಗಿ ರಾಮಜನ್ಮ ಭೂಮಿಯಲ್ಲಿ ರಾಮ ಮಂದಿರ ನಿರ್ಮಾನ ಕಾರ್ಯ ಪ್ರಗತಿಯಲ್ಲಿದು 1600 ಕೋಟಿ ವೆಚ್ಚದ ದೇವಸ್ಥಾನ ನಿರ್ಮಿಸಲು ಸಂಕಲ್ಪ ಮಾಡಲಾಗಿದ್ದು ಈ ಪುಣ್ಯ ಕಾರ್ಯಕ್ಕೆ ಪ್ರತಿಯೊಬ್ಬ ಹಿಂದು ಬಾಂಧವರು ಮುಂದಾಗಿ ಎಂದು ಕರೆನೀಡಿದರು.
ಈ ಸಂದರ್ಭ ಬಿಜೆಪಿ ಮಾಜಿ ನಗರ ಅಧ್ಯಕ್ಷ ಪಿ.ಆರ್.ಸುನೀಲ್, 7 ವಾರ್ಡಿನ ನಿಧಿ ಸಂಗ್ರಹ ಅಭಿಯಾನದ ಸದಸ್ಯರಾದ ಬಿ.ಕೆ.ಪ್ರಶಾಂತ್(ಕೋಕ) ಬಿ.ಕೆ.ಮೋಹನ, ವಾಸುದೇವ, ಬಿ.ಐ.ಭವಾನಿ, ಓಡಿಯಪ್ಪನ ವಿಮಲಾವತಿ, ಶಾಂತಿ, ವಸಂತಿ ವಿ.ಎ.ಸಂತೋಷ್, ಬಿ.ಕೆ.ರಂಜೀತ್ ಪೂಜಾರಿ, ಸಿ.ಸಿ.ಸುನೀಲ್, ಟಿ.ಪ್ರಶಾಂತ್, ಪುನೀತ್ ಕುಮಾರ್, ವೇಲುಮುರುಗನ್, ಕೊಳಂಬೆ ಸುಭಾಶ್ ಅರ್ಚಕರು ಇತರರು ಹಾಜರಿದ್ದರು.