ಕೋವಿಡ್‌ ಲಸಿಕೆ ಬಗ್ಗೆ ಆತಂಕ ಬೇಡ : ಸಿಎಂ BSY ಅಭಯ

January 16, 2021

ಬೆಂಗಳೂರು: ಕೋವಿಡ್‌ ಲಸಿಕೆ ಪಡೆದುಕೊಳ್ಳಲು ಜನರು ಯಾವುದೇ ರೀತಿಯಲ್ಲಿ ಭಯ ಆತಂಕ ಪಡಬೇಕಾದ ಅಗತ್ಯ ಇಲ್ಲ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. ಬೆಂಗಳೂರಿನಲ್ಲಿ ಶನಿವಾರ ಮಾತನಾಡಿದ ಅವರು ಲಸಿಕೆ ಸಂಪೂರ್ಣ ಸುರಕ್ಷಿತವಾಗಿದೆ ಎಂದು ತಿಳಿಸಿದರು.

ವಿಕ್ಟೋರಿಯ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ 243 ಕಡೆಗಳಲ್ಲಿ ಲಸಿಕೆ ನೀಡಲಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕಡೆಗಳಲ್ಲಿ ಲಸಿಕೆ ನೀಡಲಾಗುತ್ತದೆ ಎಂದು ತಿಳಿಸಿದರು.

ಬೆಂಗಳೂರಿನ ಬಿಡದಿಯ ಕುರುಬರ ಕನೇನಹಳ್ಳಿ ನಿವಾಸಿಯಾದ ನಾಗರತ್ನ ಎಂಬುವವರಿಗೆ ಎಲ್ಲ ಮುಖಂಡರ ಸಮ್ಮುಖದಲ್ಲಿ ಲಸಿಕೆ ನೀಡಲಾಗಿದೆ. ಇದು ದೇಶದಲ್ಲೇ ತಯಾರಾದ ಲಸಿಕೆಯಾಗಿದೆ. ಈ ನಿಟ್ಟಿನಲ್ಲಿ ಯಾವುದೇ ಆತಂಕ ಬೇಡ ಎಂದರು.

ಪ್ರಧಾನಿ ನರೇಂದ್ರ ಮೋದಿಗೆ ದೇಶದ ಎಲ್ಲ ಜನ ಅಭಿನಂದನೆ ಸಲ್ಲಿಸುತ್ತೇವೆ, ಅವರ ಪರಿಶ್ರಮದಿಂದ ಭಾರತದಲ್ಲೇ ತಯಾರಾದ ಲಸಿಕೆ ಜನರಿಗೆ ದೊರಕುವಂತಾಗಿದೆ. ಕೋವಿಡ್‌ ನಿಂದ ಸಿಕ್ಕಿ ನರಳುತ್ತಿದ್ದ ಜನರ ಪ್ರಾಣ ಉಳಿಸಲು ಕೆಲಸದಲ್ಲಿ ಮೋದಿ ಯಶಸ್ವಿ ಆಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

error: Content is protected !!