ಜಿಲ್ಲಾಸ್ಪತ್ರೆಯ ನೂತನ ಕಟ್ಟಡ ಕಾಮಗಾರಿ ಪರಿಶೀಲಿಸಿದ ಶಾಸಕರು : ಮಳೆಗಾಲಕ್ಕೂ ಮುನ್ನ ಕಾಮಗಾರಿ ಪೂರ್ಣಗೊಳಿಸಲು ಸೂಚನೆ

ಮಡಿಕೇರಿ ಜ. 16 : ಮಡಿಕೇರಿ ನಗರದ ಸಕಾ೯ರಿ ಆಸ್ಪತ್ರೆಯ ಸುಸಜ್ಜಿತ ಕಟ್ಟಡ ಕಾಮಗಾರಿಯನ್ನು ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಮತ್ತು ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ ಅವರು ಇಂದು ಪರಿಶೀಲಿಸಿದರು.
ಶಾಸಕರಾದ ಎಂ.ಪಿ. ಅಪ್ಪಚ್ಚು ರಂಜನ್, ಎಂ.ಪಿ.ಸುನೀಲ್ ಸುಬ್ರಹ್ಮಣಿ, ಮಡಿಕೇರಿ ನಗರಾಭಿವೖದ್ದಿ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್.ರಮೇಶ್ ಹೊಳ್ಳ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡೀನ್ ಡಾ.ಕಾಯ೯ಪ್ಪ ನಗರದಲ್ಲಿ ನಿಮಾ೯ಣವಾಗುತ್ತಿರುವ ಸುಸಜ್ಜಿತ ಸಕಾ೯ರಿ ಆಸ್ಪತ್ರೆಯ ಕಟ್ಟಡ ಕಾಮಗಾರಿ ವೀಕ್ಷಿಸಿದರು.
ಮಳೆಗಾಲಕ್ಕೂ ಮುನ್ನವೇ ಕಾಮಗಾರಿಯನ್ನು ಪೂಣ೯ಗೊಳಿಸುವಂತೆ ಕಟ್ಟಡ ಕಾಮಗಾರಿ ಗುತ್ತಿಗೆದಾರರಿಗೆ ಸೂಚಿಸಿದ ಶಾಸಕ ರಂಜನ್, ಹೆಚ್ಚುವರಿ ಜಾಗದ ಕೋರಿಕೆ ಹಿನ್ನಲೆಯಲ್ಲಿ ಮಂಗಳೂರು ರಸ್ತೆಯಲ್ಲಿನ ಸಕಾ೯ರಿ ಐಬಿ ಹಾಗೂ ಕಟ್ಟಡ ನಿಮಾ೯ಣವಾಗುವ ಸ್ಥಳದ ವ್ಯಾಪ್ತಿಯಲ್ಲಿನ ಖಾಸಗಿ ಜಮೀನನ್ನು ಸೂಕ್ತ ರೀತಿಯಲ್ಲಿ ವಶಕ್ಕೆ ಪಡೆಯುವ ನಿಟ್ಟಿನಲ್ಲಿಯೂ ಪರಿಶೀಲಿಸುವಂತೆ ಸಲಹೆ ನೀಡಿದರು.
ಈ ನಿಟ್ಟಿನಲ್ಲಿ ಐಬಿ ಜಾಗ ಪಡೆಯಲು ಪತ್ರ ವ್ಯವಹಾರ ನಡೆಸಲು ಡೀನ್ ಅವರಿಗೆ ಹಾಗೂ ಆಸ್ಪತ್ರೆ ನಿಮಾ೯ಣವಾಗುತ್ತಿರುವ ವ್ಯಾಪ್ತಿಯಲ್ಲಿನ ಖಾಸಗಿ ಜಾಗ ಅಗತ್ಯ ಬಿದ್ದಲ್ಲಿ ಖರೀದಿ ಬಗ್ಗೆ ಮಾತುಕತೆ ನಡೆಸುವಂತೆ ರಮೇಶ್ ಹೊಳ್ಳ ಅವರಿಗೆ ಶಾಸಕರು ಸಲಹೆ ಮಾಡಿದರು.
