ಸುಂಟಿಕೊಪ್ಪ ಗ್ರಾ.ಪಂ ನೂತನ ಸದಸ್ಯರಿಗೆ ಸನ್ಮಾನ

January 16, 2021

ಸುಂಟಿಕೊಪ್ಪ,ಜ.16: ‘ನಮ್ಮ ಸುಂಟಿಕೊಪ್ಪ’ ನೂತನ ಆಡಳಿತ ಮಂಡಳಿಗೆ ಪದಗ್ರಹಣ ಹಾಗೂ ಸುಂಟಿಕೊಪ್ಪ ಗ್ರಾಮ ಪಂಚಾಯಿತಿಗೆ ನೂತನವಾಗಿ ಆಯ್ಕೆಗೊಂಡ ಸದಸ್ಯರುಗಳಿಗೆ ಸನ್ಮಾನಿಸಲಾಯಿತು.
ಸಂತಮೇರಿ ಶಾಲಾ ಸಭಾಂಗಣದಲ್ಲಿ ನಡೆದ ಸಮಾರಂಭದ ಅಧ್ಯಕ್ಷತೆಯನ್ನು ‘ನಮ್ಮ ಸುಂಟಿಕೊಪ್ಪ’ದ ಅಧ್ಯಕ್ಷರಾದ ಡೆನ್ನಿಸ್ ಡಿಸೋಜ ವಹಿಸಿದ್ದರು.
ಮುಖ್ಯತಿಥಿಗಳಾಗಿ ಆಗಮಿಸಿದ ಮಾಜಿ ಶಾಸಕರಾದ ಕೆ.ಎಂ.ಇಬ್ರಾಹಿಂ ಮಾತನಾಡಿ ಸುಂಟಿಕೊಪ್ಪ ಇನ್ನಷ್ಟು ಅಭಿವೃದ್ಧಿಯಾಗಬೇಕಾದರೆ ಸುಂಟಿಕೊಪ್ಪ ಗ್ರಾಮ ಪಂಛಾಯಿತಿಗೆ ಆರಿಸಿ ಬಂದ 20 ಮಂದಿ ಸದಸ್ಯರುಗಳು ರಾಜಕೀಯ ರಹಿತವಾಗಿ ಅಭಿವೃದ್ಧಿ ದೃಷ್ಟಿಕೋನದಿಂದ ಕೆಲಸ ಮಾಡಬೇಕಾಗಿದೆ. 1965 ರಲ್ಲಿ ತಾನು ಸುಂಟಿಕೊಪ್ಪದ ಪುರಸಭಾ ಸದಸ್ಯನಾಗಿ ನಂತರ15 ವರ್ಷಗಳ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದೇನೆ. ಈಗ ಸುಂಟಿಕೊಪ್ಪ ಬೆಳೆಯುತ್ತಿರುವ ಪಟ್ಟಣವಾಗಿದೆ.ಎಲ್ಲಾ ಸದಸ್ಯರುಗಳು ಒಟ್ಟಾಗಿ ಶಾಸಕ ಅಪ್ಪಚ್ಚು ರಂಜನ್ ಅವರನ್ನು ಭೇಟಿಯಾಗಿ ಸುಂಟಿಕೊಪ್ಪದ ಸರ್ವಾಂಗೀಣ ಅಭಿವೃದ್ಧಿಗೆ 50 ಏಕ್ರೆ ಸರಕಾರಿ ಜಾಗವನ್ನು ಮಂಜೂರು ಮಾಡಿಸಿಕೊಂಡು ಆ ನಿಟ್ಟಿನಲ್ಲಿ ಅದನ್ನು ಬಡವರ ಇನ್ನಿತರ ಅಭಿವೃದ್ಧಿಗೆ ಬಳಸಿಕೊಳ್ಳಲು ಮುಂಧಾಗಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ನಮ್ಮ ಸುಂಟಿಕೊಪ್ಪ ದ ಸದಸ್ಯರುಗಳು ಪಂಚಾಯತ್ ರಾಜ್ ವ್ಯವಸ್ಥೆಯ ಕೈಪಿಡಿಯನ್ನು ನೂತನ ಗ್ರಾ.ಪಂ.ಸದಸ್ಯರುಗಳಿಗೆ ವಿತರಿಸಿದರು.
ನೂತನ ಸದಸ್ಯರುಗಳಾದ ಪಿ.ಎಫ್.ಸಬಾಸ್ಟೀನ್, ಸೋಮನಾಥ, ಪಿ.ಆರ್.ಸುನಿಲ್‍ಕುಮಾರ್, ಶಬ್ಬೀರ್, ರಫೀಕ್‍ಖಾನ್, ಜಿನಾಸುದ್ದೀನ್, ಆಲಿಕುಟ್ಟಿ,ಪ್ರಸಾದ್‍ಕುಟ್ಟಪ್ಪ, ನಾಗರತ್ನ ಸುರೇಶ್, ಗೀತಾ, ಮಂಜುಳ (ರಾಸಥಿ),ಶಿವಮ್ಮ ಮಹೇಶ್, ಹಸೀನಾ, ರೇಷ್ಮ, ಮಂಗಳ,ವನಿತಾ,ವಸಂತಿ ಹಾಗೂ ಶಾಂತಿ ಇವರುಗಳಿಗೆ ಹೂವಿನ ಗುಚ್ಚನೀಡಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಮಂಜುನಾಥ್ ಮತ್ತು ಬಿ.ಎಂ.ಸುರೇಶ್ ಈ ಸಂದರ್ಭದಲ್ಲಿ ಗೈರಾಗಿದ್ದು, ಉಳಿದ 18 ಮಂದಿಗೆ ಸನ್ಮಾನಿಸಿ ಅಭಿನಂದಿಸಿದರು.

error: Content is protected !!